Site icon PowerTV

ತಾಯಿಗೆ ಅವಮಾನ : AMC ಕಾಲೇಜು ಡೀನ್ ಕಿರುಕುಳಕ್ಕೆ ಮನನೊಂದು ವಿದ್ಯಾರ್ಥಿ ಆತ್ಮಹತ್ಯೆ

ಬೆಂಗಳೂರು : AMC ಕಾಲೇಜಿನಲ್ಲಿ ಡೀನ್‌ ಕಿರುಕುಳಕ್ಕೆ ಮನನೊಂದು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಿಖಿಲ್‌ (22) ಮೃತ ವಿದ್ಯಾರ್ಥಿ. ನಿಖಿಲ್‌ ಎಎಂಸಿ ಕಾಲೇಜಿನಲ್ಲಿ ಪ್ರಥಮ‌ ವರ್ಷದ ಹೊಟೇಲ್‌ ಮ್ಯಾನೇಜ್ಮೆಂಟ್‌ ವಿಭಾಗದಲ್ಲಿ ಓದುತ್ತಿದ್ದನು. ಈತ ಗಲಾಟೆ ಮಾಡಿದ್ದಾನೆ ಎಂದು ಕಾಲೇಜ್ ಆಡಳಿತ ಮಂಡಳಿ ವಿದ್ಯಾರ್ಥಿಯನ್ನು ಸಸ್ಪೆಂಡ್ ಮಾಡಲಾಗಿತ್ತು.

ಎರಡು ತಿಂಗಳ ನಂತರ ಕಾಲೇಜಿಗೆ ಕ್ಷಮೆ ಕೇಳಲು ತಾಯಿ ಮತ್ತು ಮಗ ಒಟ್ಟಿಗೆ ಹೋದಾಗ ಕಾಲೇಜಿನ ಡೀನ್ ಅವಮಾನ ಮಾಡಿದ್ದಾರೆ. ಹೊಡೆದು, ಬಡಿದು ನಿಮ್ಮಂತ ವಿದ್ಯಾರ್ಥಿಗಳು ನಮ್ಮ ಕಾಲೇಜಿಗೆ ಬೇಡ ಬ್ಯಾಲೆನ್ಸ್ ಇರುವ ಕಾಲೇಜ್ ಫೀಸ್ ನೀಡಿ ಟಿಸಿ ತೆಗೆದುಕೊಂಡು ಹೋಗಿ ಎಂದು ಹೇಳಿದ್ದಾರೆ.

ತಾಯಿ, ಮಗನಿಗೆ ಅವಮಾನ

ಈ ವೇಳೆ ಒಂದು ಸಾರಿ ಕ್ಷಮಿಸಿ ಎಂದು ನಿಖಿಲ್ ತಾಯಿ ಕಾಲು ಹಿಡಿದು ಬೇಡಿಕೊಂಡಿದ್ದಾರೆ. ಆದರೂ ಕೂಡ ಮಾನವೀಯತೆ ಮರೆತು ತಾಯಿ ಹಾಗೂ ಮಗನನ್ನು ಅವಮಾನಿಸಿದ್ದಾರೆ. ಹೀಗಾಗಿ ತನ್ನ ತಾಯಿಯ ಮಂದೆ ಅವಮಾನಿಸಿ, ನನ್ನ ತಾಯಿಗೂ ಅವಮಾನ ಮಾಡಿದ್ದಾರೆ ಎಂದು ಡೆತ್ ನೋಟ್ ಬರೆದಿಟ್ಟು ವಿದ್ಯಾರ್ಥಿ ನಿಖಿಲ್ ಸಾವಿಗೆ ಶಾರಣಾಗಿದ್ದಾನೆ.

ಕಾಲೇಜ್ ವಿರುದ್ಧ ಎಫ್​ಐಆರ್

ಕಾಲೇಜ್ ವಿರುದ್ದ ಚಂದ್ರಲೇಔಟ್ ಠಾಣೆಯಲ್ಲಿ ಪ್ರಕರಣ (ಎಫ್ಐಆರ್) ದಾಖಲಾಗಿದೆ. ಅಲ್ಲದೇ ನನ್ನ ಮಗನಿಗಾದ ಪರಿಸ್ಥಿತಿ ಬೇರೆ ಮಕ್ಕಳಿಗೆ ಆಗಬಾರದು ಇಂತಹ ಕಾಲೇಜ್ ಗಳು ಇರಬಾರದು ಎಂದು ತಾಯಿ ಕಣ್ಣೀರು ಹಾಕುತ್ತಿದ್ದಾರೆ.

Exit mobile version