Site icon PowerTV

ನೆಹರುರಂತೆ ರಾಹುಲ್‌ ಗಾಂಧಿ ವಿದೇಶಿಗರ ಕೈಗೊಂಬೆ : ಬಿಜೆಪಿ ವ್ಯಂಗ್ಯ

ಬೆಂಗಳೂರು : ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರಂತೆಯೇ ಮರಿಮೊಮ್ಮಗ ರಾಹುಲ್‌ ಗಾಂಧಿ ವಿದೇಶಿಗರ ಕೈಗೊಂಬೆ ಎಂದು ಬಿಜೆಪಿ ಲೇವಡಿ ಮಾಡಿದ್ದಾರೆ.

ಕಾಂಗ್ರೆಸ್‌ ಸಂಸ್ಥಾಪನಾ ದಿನ ಹಿನ್ನೆಲೆ ಟ್ವಿಟ್ ಮಾಡಿರುವ ರಾಜ್ಯ ಬಿಜೆಪಿ, ಇಂದು ಕಾಂಗ್ರೆಸ್‌ ಸಂಸ್ಥಾಪನಾ ದಿನ. 139 ವರ್ಷದಿಂದ ಕಾಂಗ್ರೆಸ್​ ಅದು ಹೇಗೆ ವಿದೇಶಿ ಕೈಕೊಂಬೆಯಾಗಿ ಗುಲಾಮಗಿರಿ ತೋರಿಸಿದೆ ಎನ್ನುವುದಕ್ಕೆ ಕೆಳಗಿನ ಈ ಅಂಶಗಳೇ ಸಾಕ್ಷಿ ಎಂದು ಕೆಲವು ಅಂಶಗಳ್ನು ಪಟ್ಟಿ ಮಾಡಿದೆ.

1885ರಲ್ಲಿ ಕಾಂಗ್ರೆಸ್‌ ಸ್ಥಾಪನೆ ಮಾಡಿದ್ದೇ ಬ್ರಿಟಿಷ್ ಅಧಿಕಾರಿ ಎ. ಒ. ಹ್ಯೂಮ್‌. ನೆಹರು ಅವರು ಬ್ರಿಟಿಷರಿಗೆ ನಿಷ್ಠೆಯಿಂದ ಇದ್ದ ಕಾರಣ ಪ್ರಧಾನಿ ಪಟ್ಟ ಸಿಕ್ಕಿತು. ನೆಹರು ಅವರಂತೆ ಮರಿಮೊಮ್ಮಗ ರಾಹುಲ್‌ ಗಾಂಧಿ ವಿದೇಶಿಗರ ಕೈಗೊಂಬೆಯಾಗಿದ್ದಾರೆ ಎಂದು ಕುಟುಕಿದೆ.

ಕಾಂಗ್ರೆಸ್ಸಿಗೆ ಅಸ್ತಿತ್ವವೇ ಇರುವುದಿಲ್ಲ

ಭಾರತ ವಿರೋಧಿ ರಾಷ್ಟ್ರಗಳಿಗೆ ರಾಹುಲ್‌ ಗಾಂಧಿಯೇ ಬಹುದೊಡ್ಡ ಅಸ್ತ್ರ. ರಾಹುಲ್ ಗಾಂಧಿಯವರು ಭಾರತದ ಒಳಗೆ ಮತ್ತು ಹೊರಗೆ ದೇಶವನ್ನು ಅವಮಾನಿಸುತ್ತಿದ್ದಾರೆ. ವಿದೇಶಿಗರ ಕೈಗೊಂಬೆಯಾಗಿ ರಾಹುಲ್‌ ಗಾಂಧಿ ನಶಿಸುತ್ತಿರುವ ಕಾಂಗ್ರೆಸ್‌ ಅನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. 2024ರ ಲೋಕಸಭಾ ಚುನಾವಣೆಯ ನಂತರ ಕಾಂಗ್ರೆಸ್ಸಿಗೆ ಅಸ್ತಿತ್ವವೇ ಇರುವುದಿಲ್ಲ ಎಂದು ಛೇಡಿಸಿದೆ.

Exit mobile version