Site icon PowerTV

ಭಜರಂಗ್ ಪುನಿಯಾ ಜೊತೆ ಕುಸ್ತಿ ಅಖಾಡಕ್ಕಿಳಿದ ರಾಹುಲ್ ಗಾಂಧಿ!

ಚಂಡೀಗಢ: ಹರಿಯಾಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಬಜರಂಗ್‌ ಪೂನಿಯಾ ಸೇರಿ ಹಲವು ಕುಸ್ತಿಪಟುಗಳನ್ನು ಭೇಟಿಯಾಗಿದ್ದಾರೆ. ಇದೇ ವೇಳೆ ಅವರು ಬಜರಂಗ್‌ ಪೂನಿಯಾ ಜತೆ ಕುಸ್ತಿ ಆಡಿದ್ದಾರೆ. ಈ ಫೋಟೊಗಳನ್ನು ರಾಹುಲ್‌ ಗಾಂಧಿ ಅವರೇ ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿದ್ದಾರೆ.

ಭಾರತೀಯ ಕುಸ್ತಿ ಫೆಡರೇಷನ್‌ ವಿವಾದ, ಡಬ್ಲ್ಯೂಎಫ್‌ಐ ಮಾಜಿ ಅಧ್ಯಕ್ಷ, ಬಿಜೆಪಿ ಸಂಸದ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ಕೇಳಿ ಬಂದ ಲೈಂಗಿಕ ಕಿರುಕುಳ ಆರೋಪಗಳಿಗೆ ಸಂಬಂಧಿಸಿದಂತೆ ಸಾಕ್ಷಿ ಮಲಿಕ್‌, ಬಜರಂಗ್‌ ಪೂನಿಯಾ ಸೇರಿ ಹಲವರು ಪ್ರಶಸ್ತಿ ಹಿಂತಿರುಗಿಸಿದ ಬೆನ್ನಲ್ಲೇ ಹರಿಯಾಣದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಬಜರಂಗ್‌ ಪೂನಿಯಾ ಸೇರಿ ಹಲವು ಕುಸ್ತಿಪಟುಗಳನ್ನು ಭೇಟಿಯಾಗಿದ್ದಾರೆ.

ಇದನ್ನೂ ಓದಿ: ಜ.14 ರಿಂದ ‘ಭಾರತ ನ್ಯಾಯ ಯಾತ್ರ’ ಹೆಸರಿನಲ್ಲಿ ರಾಹುಲ್​ ಗಾಂಧಿ ಪಾದಯಾತ್ರೆ!

ಇದರ ಬೆನ್ನಲ್ಲೇ ರಾಹುಲ್‌ ಗಾಂಧಿ ಅವರು ಹರಿಯಾಣದ ಜಜ್ಜರ್‌ ಜಿಲ್ಲೆಯಲ್ಲಿರುವ ವೀರೇಂದ್ರ ಆರ್ಯ ಅಖಾಡಕ್ಕೆ ಭೇಟಿಯಾಗಿ ಕುಸ್ತಿಪಟುಗಳೊಂದಿಗೆ ಚರ್ಚಿಸಿದರು. ಹಾಗೆಯೇ ಅವರು ಬಜರಂಗ್ ಪೂನಿಯಾ ಅವರ ಜತೆ ಕುಸ್ತಿ ಆಡಿದರು.

Exit mobile version