Site icon PowerTV

ಟ್ರ್ಯಾಕ್ಟರ್ ಪಲ್ಟಿ : 6 ಜನರಿಗೆ ಗಾಯ, ತಪ್ಪಿದ ಭಾರಿ ಅನಾಹುತ

ಬಳ್ಳಾರಿ : ಜಿಲ್ಲೆಯ ಕಂಪ್ಲಿ ನಗರದ ಹೊರ ವಲಯದಲ್ಲಿರುವ ಕೃಷಿ ತರಬೇತಿ ಕೇಂದ್ರದ ಬಳಿ ಹುಲ್ಲಿನ ಟ್ರ್ಯಾಕ್ಟರ್ ಪಲ್ಟಿಯಾಗಿ ಸುಮಾರು 6 ಜನಕ್ಕೆ ಗಾಯವಾದ ಘಟನೆ ನಡೆದಿದೆ.

ಚಿನ್ನಪುರದಿಂದ ಭತ್ತದ ಹುಲ್ಲನ್ನು ಹೊತ್ತು ತರುತ್ತಿದ್ದ ಟ್ರ್ಯಾಕ್ಟರ್, ಚಾಲಕನ ನಿರ್ಲಕ್ಷ್ಯದಿಂದ ಪಲ್ಟಿಯಾಗಿದೆ. ಈ ದುರ್ಘಟನೆಯಲ್ಲಿ ಟ್ರಾಕ್ಟರ್ ನಲ್ಲಿದ್ದ ಸುಮಾರು 5 ರಿಂದ 6 ಜನರಿಗೆ ಗಾಯಗಳಾಗಿವೆ.

ಇನ್ನೂ ರಸ್ತೆಗೆ ಅಡ್ಡಲಾಗಿ ಬಿದ್ದ ಟ್ರಾಕ್ಟರ್ ಮತ್ತು ಟ್ರ್ಯಾಲಿಯನ್ನು ಮೇಲೆತ್ತಲು, ವಾಹನ ಸವಾರರು ಹರಸಾಹಸ ಪಡಬೇಕಾಯಿತು‌. ಕೆಲ ಸಮಯದವರೆಗೆ ಟ್ರಾಫಿಕ್ ಜಾಮ್ ಉಂಟಾಗಿ, ವಾಹನ ಸವಾರರು ಪರದಾಡುವಂತಾಯಿತು. ಗಾಯಾಳುಗಳನ್ನು ನಗರದ ಆರೋಗ್ಯ ಸಮುದಾಯ ಕೇಂದ್ರಕ್ಕೆ ಕರೆದೊಯ್ದು, ಚಿಕಿತ್ಸೆ ಕೊಡಿಸಲಾಗಿದೆ.

Exit mobile version