Site icon PowerTV

ಮುಸ್ಲಿಮರಿಗೆ 3 ಟಿಕೆಟ್ ಕೊಡ್ತಾರೆ : ಸಚಿವ ರಹೀಂ ಖಾನ್

ಕಲಬುರಗಿ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯಕ್ಕೆ 2ರಿಂದ 3 ಟಿಕೆಟ್ ಕೊಡುತ್ತಾರೆ ಎಂದು ಸಚಿವ ರಹೀಂ ಖಾನ್ ಹೇಳಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾವಾಗಲೂ ಮುಸ್ಲಿಂ ಸಮುದಾಯಕ್ಕೆ ಕಾಂಗ್ರೆಸ್ ಎರಡ್ಮೂರು ಟಿಕೆಟ್ ಕೊಡುತ್ತದೆ. ಈ ಬಾರಿಯು ಎರಡ್ಮೂರು ಟಿಕೆಟ್ ಕೊಡ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸಲ ನೂರಕ್ಕೆ ನೂರರಷ್ಟು ಒಳ್ಳೆಯ ವಾತಾವರಣ ಇದೆ. ಕಾಂಗ್ರೆಸ್​​ನಿಂದ ಒಳ್ಳೆಯ ಕೆಲಸ ಆಗುತ್ತಿದೆ. ನಮ್ಮ ಸಮಾಜಕ್ಕೆ ಟಿಕೆಟ್ ಕೊಟ್ಟೇ ಕೊಡ್ತಾರೆ ಅಂತ ಗ್ಯಾರೆಂಟಿ ಇದೆ. ಐದು ಗ್ಯಾರಂಟಿ ಸರ್ಕಾರ ಕೊಟ್ಟಿದೆ, ಜನ ಖುಷಿಯಿಂದ ಇದ್ದಾರೆ. ನಮಗೆ ನೂರಕ್ಕೆ ನೂರರಷ್ಟು ಟಿಕೆಟ್ ಕೊಡ್ತಾರೆ ಅಂತ ಇದೆ ಎಂದು ಹೇಳಿದ್ದಾರೆ.

ಸೋನಿಯಾ ಗಾಂಧಿಗೆ ಮನವಿ ಮಾಡುತ್ತೇವೆ

ನಮ್ಮ ಸಮುದಾಯಕ್ಕೆ ಟಿಕೆಟ್ ಕೊಡಬೇಕು ಅಂತ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್​​ ಖರ್ಗೆ, ಕಾಂಗ್ರಸ್​​ ನಾಯಕ ರಾಹುಲ್, ಕಾಂಗ್ರೆಸ್​​ ನಾಯಕಿ ಸೋನಿಯಾ ಗಾಂಧಿಗೆ ಮನವಿ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

ಇನ್ನು, ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಪಕ್ಷದ ನೀತಿ ಬಗ್ಗೆ ಪರಮೇಶ್ವರ್​​​ ಅವರು ಯಾವ ರೀತಿಯಲ್ಲಿ ಹೇಳಿದ್ದಾರೆ ನನಗೆ ಗೊತ್ತಿಲ್ಲ ಎಂದು ಸಚಿವ ರಹೀಂ ಖಾನ್ ಹೇಳಿದ್ದಾರೆ.

Exit mobile version