Site icon PowerTV

New year Celebration: ನ್ಯೂ ಇಯರ್​ಗೆ ಕೋವಿಡ್‌ ಮಾರ್ಗಸೂಚಿ ಇಲ್ಲ,ಬಿಗಿ ಭದ್ರತೆ ಮಾತ್ರ: ಪೊಲೀಸ್ ಆಯುಕ್ತ ಬಿ ದಯಾನಂದ

ಬೆಂಗಳೂರು: ಸಿಲಿಕಾನ್​ ಸಿಟಿಯಲ್ಲಿ ಹೊಸ ವರ್ಷಾಚರಣೆಗೆ ಯಾವುದೇ ಕೋವಿಡ್‌ ಮಾರ್ಗಸೂಚಿ ಇಲ್ಲ,ಬಿಗಿ ಭದ್ರತೆ ಮಾತ್ರ ಎಂದು ಪೊಲೀಸ್ ಆಯುಕ್ತ ಬಿ ದಯಾನಂದ ಹೇಳಿದ್ದಾರೆ. 

ಮಾಧ್ಯಮ ಗೋಷ್ಠಿಯನ್ನು ಮಾತನಾಡಿದ ಅವರು,ಹೊಸ ವರ್ಷಾಚರಣೆಗೆ ಸಂಬಂಧಿಸಿ ಎರಡು ಸುತ್ತಿನ ಸಭೆ ಮಾಡಿದ್ದೇವೆ. ಗೃಹಮಂತ್ರಿಯ ಅಧ್ಯಕ್ಷತೆಯಲ್ಲಿ ಎಲ್ಲಾ ಇಲಾಖೆಯ ಜೊತೆಗೆ ಚರ್ಚೆ ನಡೆಸಿದ್ದೇವೆ. ಚರ್ಚೆಗಳ ಒಟ್ಟು ಹಿನ್ನೆಲೆಗಳನ್ನು ಇಟ್ಟುಕೊಂಡು ಭದ್ರತೆ, ಸುರಕ್ಷತೆಯ ವ್ಯವಸ್ಥೆಗಳನ್ನು ಮಾಡಿದ್ದೇವೆ ಎಂದು ತಿಳಿಸಿದರು.

ಹೊಸ ವರ್ಷಾಚರಣೆಗೆ ಬೆಂಗಳೂರಿಗೆ ಗೈಡ್​ಲೈನ್ಸ್​​​ ಹೀಗಿದೆ

ಡಿಸೆಂಬರ್‌ 31ರ ರಾತ್ರಿ ಸಂಭ್ರಮಾಚರಣೆಗೆ ಅತಿ ಹೆಚ್ಚು ಜನ ಸೇರುವುದರಿಂದ ಮಾರ್ಗ ಸಂಚಾರ ಬದಲಾವಣೆಯನ್ನು ಮಾಡಲಾಗುತ್ತದೆ ಎಂದು ಹೇಳಿದ್ದರು.ಇನ್ನೂ ಸುದ್ದಿಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ಸಂಚಾರ ಎಂ ಎನ್ ಅನುಚೇತ್ ಉಪಸ್ಥಿತರಿದ್ದರು.

 

 

Exit mobile version