Site icon PowerTV

ಪ್ರತಾಪ್ ಸಿಂಹ ಅಕೌಂಟಿನಿಂದ ಮನೋರಂಜನ್​ಗೆ ದುಡ್ಡು ಹೋಗಿದೆ : ಲಕ್ಷ್ಮಣ್ ಗಂಭೀರ ಆರೋಪ

ಬೆಂಗಳೂರು : ಸಂಸದ ಪ್ರತಾಪ್ ಸಿಂಹ ಅಕೌಂಟಿನಿಂದ ಮನೋರಂಜನ್ ಅಕೌಂಟಿಗೆ ದುಡ್ಡು‌ ಹೋಗಿದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಗಂಭೀರ ಆರೋಪ ಮಾಡಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೀಗೆಂದು ಮೈಸೂರಿನ ಜನ ಮಾತನಾಡುತ್ತಿದ್ದಾರೆ. ಇದರ ಬಗ್ಗೆ ಪ್ರತಾಪ್ ಸಿಂಹ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ಪ್ರತಾಪ್ ಸಿಂಹ.. ನೀನು ಕೂತು ಸುದ್ದಿಗೋಷ್ಠಿ ಮಾಡಿದ್ಯಾ? ನಿನ್ನ ಯೋಗ್ಯತೆಗೆ ಪ್ರೆಸ್​ಮೀಟ್ ಮಾಡಿದ್ಯಾ? ನಿಂತೇ ಮಾತನಾಡಿ ಹೋಗುವ ವ್ಯಕ್ತಿ ನೀನು. ಮನೋರಂಜನ್​ಗೂ ನಿಮಗೂ ಏನು ಸಂಬಂಧ? ನನಗೂ ಮನೋರಂಜನ್​ಗೂ ಸಂಬಂಧ ಇಲ್ಲ ಅಂತ ಹೇಳು. ಯಾಕೆ ಏನನ್ನೂ ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು.

ವಿಕ್ರಮಸಿಂಹ ರೌಡಿಸಂ ಮಾಡಿದ್ದಾರೆ

ವಿಕ್ರಮ ಸಿಂಹ ಮರಗಳ್ಳತನ ಮಾಡಿದ್ದಾರೆ. ಅರಣ್ಯದಲ್ಲಿರುವ ಮರಗಳನ್ನ ಕಡಿಸಿದ್ದಾರೆ. ಜಯಮ್ಮ ಎಂಬುವರಿಂದ ಜಮೀನು ಪಡೆದಿದ್ದಾರೆ. 3.16 ಎಕರೆ ಜಮೀನು ಶುಂಠಿ ಬೆಳೆಯಲು ಪಡೆದಿದ್ದಾರೆ. ಜಮೀನು ಪಕ್ಕದಲ್ಲಿರುವ ಅರಣ್ಯದಲ್ಲಿ ಮರ ಕಡಿಸಿದ್ದಾರೆ. ಇಷ್ಟೇ ಅಲ್ಲ ವಿಕ್ರಮಸಿಂಹ ಮೇಲೆ ರೌಡಿಸಂ ಆರೋಪ ಕೂಡ ಇದೆ. ಸಕಲೇಶಪುರದಲ್ಲಿ 30 ಎಕರೆ ರೆಸಾರ್ಟ್ ನಿರ್ಮಾಣ, ೬ ಕೋಟಿ ಖರ್ಚು ಮಾಡಿ ಬಂಗ್ಲೆ ಕಟ್ಟಿಸುತ್ತಿದ್ದಾರೆ. ಈ ಹಣ ಎಲ್ಲಿಂದ ಬಂದಿದೆ ಹೇಳಿ ಎಂದು ಲಕ್ಷ್ಮಣ್ ಹರಿಹಾಯ್ದರು.

Exit mobile version