Site icon PowerTV

ಮುಂಬೈ IIT ಗೆ ಹಳೆ ವಿದ್ಯಾರ್ಥಿಗಳಿಂದ 57 ಕೋಟಿ ರೂ. ದೇಣಿಗೆ!

ಮುಂಬೈ: 1998ರ ಬ್ಯಾಚ್​ ವಿದ್ಯಾರ್ಥಿಗಳು ತಾವು ಶಿಕ್ಷಣ ಪಡೆದ ಬಾಂಬೆ ಐಐಟಿ ಸಂಸ್ಥೆಗೆ 57 ಕೋಟಿ ರೂಗಳ ದೇಣಿಗೆ ನಿಡುವ ಮೂಲಕ ದಾಖಲೆ ಬರೆದಿದ್ದಾರೆ.
ಬಾಂಬೆ ಐಐಟಿಯಲ್ಲಿ 1998 ರಲ್ಲಿ ಓದಿದ ಒಂದೇ ತರಗತಿಯ ಸುಮಾರು 200 ವಿದ್ಯಾರ್ಥಿಗಳು ಜಗತ್ತಿನ ಪ್ರತಿಷ್ಟಿತ ಕಂಪೆನಿಗಳಲ್ಲಿ ಉದ್ಯೋಗ ಪಡೆದು ತಾವು ಸಂಪಾದಸಿದ ಹಣದಲ್ಲಿ ಸಂಸ್ಥೆಗೆ 57 ಕೋಟಿ ರೂಪಾಯಿಗಳ ಬೃಹತ್ತ್​ ದೇಣಿಗೆ ನೀಡಿದ್ದಾರೆ. ಇದರೊಂದಿಗೆ ಈ ಹಿಂದೆ 1971 ರ ಬ್ಯಾಚ್​ ನ ವಿದ್ಯಾರ್ಥಿಗಳು ಇದೇ ಬಾಂಬೆ ಐಐಟಿ ಗೆ 41 ಕೋಟಿಯನ್ನು ದೇಣಿಗೆ ನೀಡಿದ್ದರು ಇದೀಗ ಈ ದಾಖಲೆಯನ್ನು 1998ರ ಬ್ಯಾಚ್​ ವಿದ್ಯಾರ್ಥಿಗಳು ಮುರಿದಿದ್ದಾರೆ.
ಇದನ್ನೂ ಓದಿ: ಅಯೋಧ್ಯೆಗೆ ಪಾದಯಾತ್ರೆ ಹೊರಟ ಮುಸ್ಲಿಂ ಯುವತಿ!
ದೇಣಿಗೆ ರೂಪದಲ್ಲಿ ನೀಡಿದ ಈ ಕೋಟ್ಯಾಂತರ ರೂಗಳ ಹಣವನ್ನು ಮುಂಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಹಾಸ್ಟೆಲ್‌, ಹೊಸ AIಲ್ಯಾಬ್, ವಿದ್ಯಾರ್ಥಿ ವೇತನವನ್ನು ನೀಡಲು ಬಳಸಲಾಗುತ್ತದೆ.
Exit mobile version