Site icon PowerTV

ಬಿಗ್‌ಬಾಸ್ ಸರ್ಪ್ರೈಸ್: ಸ್ಪರ್ಧಿಗಳ ಕುಟುಂಬದವರು ದೊಡ್ಡನೆಗೆ..!

ಬೆಂಗಳೂರು: ಕಿತ್ತಾಟದ ಜಜಾಟದ ಟಾಸ್ಕ್​ ಜೊತೆಗೆ ಬಿಗ್ ಬಾಸ್​ ಮನೆಮಂದಿಗೆ ಬಿಗ್ ಸರ್ಪ್ರೈಸ್​  ಕೊಟ್ಟಿದ್ದಾರೆ. 

ಹೌದು, ಸುದೀಪ್ ಇಲ್ಲದೆ ಈ ವಾರಾಂತ್ಯ ಕಳೆದು ಹೊಸ ವಾರ ಶುರುವಾಗಿದೆ. ಹೊಸ ಉತ್ಸಾಹದೊಂದಿಗೆ, ಅಗ್ರೆಸಿವ್ ಅಲ್ಲದೆ ಸೌಹಾರ್ದಯುತವಾಗಿ ಆಡುವ ಸಂಕಲ್ಪದೊಂದಿಗೆ ಮನೆಮಂದಿ ಕಣಕ್ಕಿಳಿದಿದ್ದಾರೆ.

ಈ ಸಂದರ್ಭದಲ್ಲಿ ಬಿಗ್ ಬಾಸ್ ಮನೆಯ ಮಂದಿಗೆ ಹೊಸದೊಂದು ಸಿಹಿಯಾದ ಸರ್ಪೈಸ್ ನೀಡಿದ್ದಾರೆ. ಅದೇನೆಂಬುದು JioCinema ಬಿಡುಗಡೆ ಮಾಡಿರುವ ಪ್ರೋಮೊದಲ್ಲಿ ಜಾಹೀರಾಗಿದೆ.

ಬಿಗ್ ಬಾಸ್ ಮನೆಯ ಸದಸ್ಯರು ಮನೆಯ ಚಟುವಟಿಕೆಗಳಲ್ಲಿ ನಿರತರಾಗಿರುವಾಗ, ಸದಸ್ಯರು ಕುಟುಂಬದವರು ಮನೆಯೊಳಗೆ ಬರುವ ಸೂಚನೆ ಸಿಕ್ಕಿದೆ. ಇದನ್ನು ಮೊದಲು ಊಹಿಸಿದ್ದು ಮನೆಯ ಕ್ಯಾಪ್ಟನ್ ನಮ್ರತಾ ಅವರು. ‘ಮನೆಯವ್ರು ಬರ್ತಿದಾರೆ’ ಎಂದು ಕುಣಿದಾಡಿದ್ದಾರೆ.

ಇದನ್ನೂ ಓದಿ: ಮೋದಿಯವರೇನು ಆರ್ಥಿಕ ತಜ್ಞರಾ? : ಸಿದ್ದರಾಮಯ್ಯ

ನಮ್ರತಾ ಅವರ ತಾಯಿ, ವರ್ತೂರ್ ಅವರ ಅಮ್ಮ ಬಿಗ್ ಬಾಸ್ ಮುಖ್ಯದ್ವಾರದಿಂದ ಬಂದಿರುವುದು ಪ್ರೋಮೊದಲ್ಲಿ ಜಾಹೀರಾಗಿದೆ. ಮತ್ತೆ ಯಾವೆಲ್ಲ ಸದಸ್ಯರ ಮನೆಯವರು ಬಿಗ್ ಬಾಸ್ ಮನೆಯೊಳಗೆ ಭೇಟಿ ಕೊಟ್ಟಿದ್ದಾರೆ? ಮನೆಯವರನ್ನು ನೋಡಿ ಸದಸ್ಯರ ರಿಯಾಕ್ಷನ್ ಹೇಗಿತ್ತು? ಇವನ್ನೆಲ್ಲ ನೋಡಲು ಬಿಗ್ ಬಾಸ್ ಇಂದಿನ ಸಂಚಿಕೆ ಪ್ರಸಾರವಾಗುವವರಿಗೂ ಕಾದುನೋಡಬೇಕಿದೆ.

 

 

Exit mobile version