Site icon PowerTV

ರಾಜ್ಯದಲ್ಲಿ JN-1 ಸೋಂಕಿತರ ಸಂಖ್ಯೆ 35ಕ್ಕೆ ಏರಿಕೆ, ಕೊರೋನಾಗೆ ಮೂವರು ಬಲಿ

ಬೆಂಗಳೂರು : ರಾಜ್ಯದಲ್ಲಿ ಕೊರೋನಾ ತನ್ನ ಅಸಲಿ ಆಟ ಶುರು ಮಾಡಿದಂತಿದೆ. ಯಾಕಂದ್ರೆ ಒಂದೇ ದಿನದಲ್ಲಿ ರಾಜ್ಯದಲ್ಲಿ ಬರೋಬ್ಬರಿ 35 ಜನರಿಗೆ ಒಮಿಕ್ರಾನ್ ಉಪತಳಿ JN.1 ಸೋಂಕು ಧೃಡವಾಗಿದೆ.

ಬೆಂಗಳೂರಿನಲ್ಲಿ 20 ಜನರಿಗೆ JN.1 ಸೋಂಕು ಪತ್ತೆಯಾಗಿದೆ. ಮೈಸೂರು ಜಿಲ್ಲೆಯಲ್ಲಿ ನಾಲ್ವರಿಗೆ JN.1 ಧೃಡ ಪಟ್ಟಿದೆ. ಇನ್ನು ಮಂಡ್ಯ ಜಿಲ್ಲೆಯಲ್ಲಿ ಮೂವರಿಗೆ ಸೋಂಕು ತಗುಲಿದ್ದು, ಬೆಂಗಳೂರು ಗ್ರಾಮಾಂತರ, ರಾಮನಗರ, ಕೊಡಗು, ಚಾಮರಾಜನಗರದಲ್ಲಿ ತಲಾ 1 ಕೇಸ್ ಪತ್ತೆಯಾಗಿದೆ.

ಇನ್ನು, ದೇಶದಲ್ಲಿ JN.1 ಸೋಂಕಿತರ ಸಂಖ್ಯೆ 63ಕ್ಕೆ ಏರಿಕೆಯಾಗಿದ್ದು, ಗೋವಾದಲ್ಲಿ 34, ಮಹಾರಾಷ್ಟ್ರದಲ್ಲಿ 9, ಕೇರಳದಲ್ಲಿ 6 ಜನರಿಗೆ JN.1 ವೈರಸ್ ಸೊಂಕು ಕಂಡುಬಂದಿದೆ. ಇನ್ನು, ತಮಿಳುನಾಡಿನಲ್ಲಿ 4, ತೆಲಂಗಾಣದಲ್ಲಿ ಇಬ್ಬರಿಗೆ ಸೋಂಕು ದೃಢ ಪಟ್ಟಿರೋದಾಗಿ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ.

ಕೊರೋನಾಗೆ ಮೂವರು ಬಲಿ

ರಾಜ್ಯದಲ್ಲಿ ಮಹಾಮಾರಿ ಕೊರೋನಾ ಸೋಂಕಿಗೆ ಮೂವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ. ಇಂದು ಒಂದೇ ದಿನ 125 ಪಾಸಿಟಿವ್ ಪ್ರಕರಣ ವರದಿಯಾಗಿದೆ. ಸದ್ಯ 436 ಸಕ್ರಿಯ ಪ್ರಕರಣಗಳಿದ್ದು, ಸೋಂಕಿನ ಪಾಸಿಟಿವಿಟಿ ದರ ಶೇ.3.96ರಷ್ಟಿದೆ. ಕಳೆದ 24 ಗಮಟೆಗಳಲ್ಲಿ ಒಟ್ಟು 3,155 ಕೊವಿಡ್ ಟೆಸ್ಟ್​ ಮಾಡಲಾಗಿದೆ.

Exit mobile version