Site icon PowerTV

‘ಕಾಟೇರ’ ಚಿತ್ರದ ಫಸ್ಟ್ ಶೋ ಟಿಕೆಟ್ ಸೋಲ್ಡ್ಔಟ್

ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಕಾಟೇರ’ ಸಿನಿಮಾ ಇದೇ ಡಿಸೆಂಬರ್ 29ಕ್ಕೆ ರಿಲೀಸ್​ ಆಗಲಿದ್ದು, ಇದೀಗ ಮುಂಗಡ ಟಿಕೆಟ್ ಬುಕ್ಕಿಂಗ್ ಸಹ ಓಪನ್ ಆಗಿದೆ.

ಮೂಲಗಳ ಪ್ರಕಾರ 4 ದಿನಗಳ ಮುಂಚೆಯೇ ‘ಕಾಟೇರ’ ಚಿತ್ರದ ಮೊದಲ ಶೋಗಳು ಸೋಲ್ಡ್​ಔಟ್​ ಆಗಿವೆ. ಬುಕ್ಕಿಂಗ್ ಓಪನ್​ ಆದ ಕೆಲವೇ ಗಂಟೆಗಳಲ್ಲಿ ಮಾಗಡಿ ರಸ್ತೆಯ ಪ್ರಸನ್ನ ಚಿತ್ರಮಂದಿರದಲ್ಲಿ 6,850 ಟಿಕೇಟ್ ಗಳು ಸೋಲ್ಡ್ ಔಟ್ ಆಗಿದೆ.

ಕೆೇವಲ 48 ಗಂಟೆಗಳಲ್ಲಿ ಎಲ್ಲಾ ಚಿತ್ರ ಮಂದಿರಗಳಲ್ಲಿ ‘ಕಾಟೇರ’ 30,000 ಟಿಕೇಟ್ ಗಳು ಸೋಲ್ಡ್ ಔಟ್ ಆಗಿದೆ. ಇನ್ನು ಬೆಂಗಳೂರಿನ ಅನುಪಮಾ ಚಿತ್ರಮಂದಿರ, ಮೋಹನ್ ಥಿಯೇಟರ್, ವೈಭವಿ ಚಿತ್ರಮಂದಿರ, ಮೈಸೂರಿನ ರಾಜ್​ಕಮಾಲ್ ಥಿಯೇಟರ್​ಗಳಲ್ಲೂ ಬೆಳಗ್ಗಿನ ಶೋನ ಟಿಕೆಟ್ ಸೋಲ್ಡ್​ಔಟ್​ ಆಗಿದೆ.

ಗುರು ದೇಶಪಾಂಡೆಗೆ ‘ಕಾಟೇರ’ ವಿತರಣೆ ಹಕ್ಕು

ನಿರ್ದೇಶಕ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ಅವರು ‘ಕಾಟೇರ’ ಚಿತ್ರದ ಕಲ್ಯಾಣ ಕರ್ನಾಟಕ ಭಾಗದ ವಿತರಣೆ ಹಕ್ಕುಗಳನ್ನು ಖರೀದಿಸಿದ್ದಾರೆ. ಈಗಾಗಲೇ ಚಿತ್ರ ಮೊದಲ ಹಂತದ ಥೀಯೇಟರ್ ಲಿಸ್ಟ್ ಬಿಡುಗಡೆಯಾಗಿದ್ದು, ಇನ್ನೆರಡು ದಿನಗಳಲ್ಲಿ ಸಂಪೂರ್ಣ ಥಿಯೇಟರ್ ಲೀಸ್ಟ್​ ಹೊರಬೀಳಲಿದೆ.

‘ಕಾಟೇರ’ ಚಿತ್ರತಂಡ ಈಗಾಗಲೇ ಮೂರು ಹಾಡು ಹಾಗೂ ಟ್ರೈಲರ್​ ಬಿಡುಗಡೆ ಮಾಡಿದೆ. ಎಲ್ಲೆಡೆ ಕಾಟೇರನ ನಯಾ ಅವತಾರಕ್ಕೆ ಸಿನಿ ಪ್ರೇಕ್ಷಕರು ಫಿದಾ ಆಗಿದ್ದಾರೆ. ನಟ ದರ್ಶನ್​ ಜೊತೆಗೆ ಮಾಲಾಶ್ರೀ ಅವರ ಮಗಳು ಆರಾಧನಾ ನಾಯಕಿಯಾಗಿ ಅಭಿನಯಿಸಿದ್ದಾರೆ. ರಾಕ್​ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ತರುಣ್ ಕಿಶೋರ್ ಸುಧೀರ್ ಡಿ ಬಾಸ್​ಗೆ ಆಕ್ಷನ್​ ಕಟ್ ಹೇಳಿದ್ದಾರೆ.

Exit mobile version