Site icon PowerTV

ನಾಳೆಯಿಂದ ಟೆಸ್ಟ್ ಸರಣಿ.. ಆಫ್ರಿಕಾ ನೆಲದಲ್ಲಿ ಈವರೆಗೆ ಟೆಸ್ಟ್ ಸರಣಿ ಗೆದ್ದಿಲ್ಲ ಭಾರತ

ಬೆಂಗಳೂರು : ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಮಹತ್ವದ ಟೆಸ್ಟ್​ ಸರಣಿ ನಾಳೆಯಿಂದ ಆರಂಭವಾಗಲಿದೆ.

ಇಲ್ಲಿನ ಸೆಂಚುರಿಯನ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಬಾಕ್ಸಿಂಗ್ ಡೇ ಟೆಸ್ಟ್​ಗೆ ಭಾರತದ ಬ್ಯಾಟರ್​ಗಳು ಸಜ್ಜಾಗಿದ್ದಾರೆ. ಆಫ್ರಿಕಾ ನೆಲದಲ್ಲಿ ಭಾರತ ಈವರೆಗೆ ಟೆಸ್ಟ್ ಸರಣಿ ಗೆದ್ದಿಲ್ಲ. ಹೆಚ್ಚು ಯುವ ಆಟಗಾರರನ್ನೇ ಒಳಗೊಂಡಿರುವ ಭಾರತ ಈ ಬಾರಿ ಸರಣಿ ಗೆದ್ದು ಇತಿಹಾಸ ನಿರ್ಮಿಸುತ್ತಾ ಎಂದು ಕಾದುನೋಡಬೇಕಿದೆ.

ಟಿ-20 ಹಾಗೂ ಏಕದಿನ ಸರಣಿ ಮುಗಿಸಿರುವ ಭಾರತ ಹಿರಿಯ ಆಟಗಾರ ಉಪಸ್ಥಿತಿಯಲ್ಲಿ ಟೆಸ್ಟ್​ ಸರಣಿಗೆ ಸಿದ್ಧವಾಗಿದೆ. ನಾಯಕ ರೋಹಿತ್ ಶರ್ಮಾ ಹಾಗೂ ರನ್ ಮೆಷಿನ್ ವಿರಾಟ್ ಕೊಹ್ಲಿ ವಿಶ್ವಕಪ್ ಬಳಿಕ ಇಬ್ಬರೂ ಮತ್ತೆ ಭಾರತದ ಜೆರ್ಸಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಈಗಾಗಲೇ ನೆಟ್ಸ್​ನಲ್ಲಿ ಬೆವರು ಹರಿಸಿದ್ದಾರೆ.

ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭ್​ಮನ್ ಗಿಲ್, ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಮುಖೇಶ್ ಕುಮಾರ್, ಜಸ್ಪ್ರೀತ್ ಬುಮ್ರಾ (ಉಪ ನಾಯಕ), ಪ್ರಸಿದ್ಧ್ ಕೃಷ್ಣ, ಕೆ.ಎಸ್. ಭರತ್ (ವಿಕೆಟ್ ಕೀಪರ್), ಅಭಿಮನ್ಯು ಈಶ್ವರನ್

Exit mobile version