Site icon PowerTV

ಬರಗಾಲ ಬರ್ಲಿ ಅಂತ ರೈತರಿಗೆ ಆಸೆ ಇರುತ್ತೆ: ನಾಲಗೆ ಹರಿಬಿಟ್ಟ ಸಚಿವ ಶಿವಾನಂದ ಪಾಟೀಲ್

ಬೆಳಗಾವಿ: ಪದೇಪದೆ ಬರಗಾಲ ಬರಲಿ ಅಂತ ರೈತರಿಗೆ ಆಸೆ ಅವರು ಸಾಲ ಮನ್ನಾದ ನಿರೀಕ್ಷೆ ಇಟ್ಟುಕೊಳ್ಳುತ್ತಾರೆ ಎಂದು ಮತ್ತೆ ರೈತರ ಮೇಲೆ ನಾಲಗೆ ಹರಿಬಿಟ್ಟು ಹಗುರವಾಗಿ ಸಕ್ಕರೆ ಸಚಿವ ಶಿವಾನಂದ ಪಾಟೀಲರೇ ಮಾತನಾಡಿದ್ದಾರೆ. 

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದಲ್ಲಿ ಗ್ರಾಮೀಣ ಕೃಷಿ ಸ್ವ ಸಹಾಯ ಸಂಘದ ಉದ್ಘಾಟನಾ  ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಬರಗಾಲ ಬರಲೆಂದು ರೈತರು ದಾರಿ ಕಾಯುತ್ತಿದ್ದಾರೆ ಅವರ ನಿರೀಕ್ಷೆ ಸಾಲಮನ್ನಾ ಎಂದು ರೈತರ ಬಗ್ಗೆ ಕಾಳಜಿಯಿಲ್ಲದೇ ಮಾತನಾಡಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮತ್ತೆ ಹರಿದ ನೆತ್ತರು.. ಸಿನಿಮಾ ಸ್ಟೈಲ್‌ನಲ್ಲಿ ರೌಡಿ ಶೀಟರ್ ಬರ್ಬರ ಹತ್ಯೆ

ಈ ಹಿಂದೆ ಅವರ ಪರಿಹಾರ ಪಡೆಯಲು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ರೈತರ ಆತ್ಮಹತ್ಯೆ ಬಗ್ಗೆ ವಿವಾತ್ಮಾಕ ಹೇಳಿಕೆ ನೀಡಿ ರೈತರ ಬಗ್ಗೆ ಮಾತನಾಡಿ ವಿವಾದ ಸೃಷ್ಟಿ ಮಾಡಿದ್ದರು. ಇವರಿಗೆ ಅನ್ನದಾತರ ಸಂಕಷ್ಟದ ಬಗ್ಗೆ ಅರಿವಿಲ್ಲ ಒಬ್ಬ ಸಚಿವರಾಗಿ ಈ ರೀತಿ ಮಾತನಾಡಬಾರದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Exit mobile version