Site icon PowerTV

ಮನುಸ್ಮೃತಿಯ ಪಳೆಯುಳಿಕೆಗಳನ್ನು ಸುಟ್ಟು ಹಾಕಿ : ಸಿದ್ದರಾಮಯ್ಯ

ಬೆಂಗಳೂರು : ಮನುಸ್ಮೃತಿಯ ಪಳೆಯುಳಿಕೆಗಳನ್ನು ಸುಟ್ಟು ಹಾಕಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಮನುಸ್ಮೃತಿ ದಹನ ದಿನದ ಬಗ್ಗೆ ಟ್ವೀಟ್ ಮಾಡಿರುವ ಅವರು, ಹಿಂದುತ್ವದ ಮುಸುಕಿನ ಒಳಗೆ ಆಧುನಿಕ ಮನುವಾದಿಗಳು ಅಡಗಿ ಕುಳಿತಿದ್ದಾರೆ. ಅಚ್ಚರ..! ಎಂದು ತಿಳಿಸಿದ್ದಾರೆ.

ಅಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಜಾತಿ ಮತ್ತು ಲಿಂಗತಾರತಮ್ಯವನ್ನು ಸಾರುವ ಅಲಿಖಿತ ಸಂವಿಧಾನ ಮನುಸ್ಮೃತಿಯನ್ನು ಸುಟ್ಟುಹಾಕಿದ್ದರು. ಇಂದು ನಾವೆಲ್ಲರೂ ನಮ್ಮೊಳಗೆ ಇನ್ನೂ ಉಳಿದಿರಬಹುದಾದ ಆ ಮನುಸ್ಮೃತಿಯ ಪಳೆಯುಳಿಕೆಗಳನ್ನು ಸುಟ್ಟು ಹಾಕಬೇಕು ಎಂದು ಕರೆ ಕೊಟ್ಟಿದ್ದಾರೆ.

ಅಲಿಖಿತ ಸಂವಿಧಾನ ನಾಶವಾಗಬೇಕು

ಆ ಅಲಿಖಿತ ಸಂವಿಧಾನ ನಾಶವಾಗಬೇಕು. ಇಲ್ಲವಾದರೆ, ಬಾಬಾ ಸಾಹೇಬ್ ಅಂಬೇಡ್ಕರ್ ದೇಶಕ್ಕೆ ನೀಡಿರುವ ಲಿಖಿತ ಸಂವಿಧಾನದ ಸಂಪೂರ್ಣ ಅನುಷ್ಠಾನ ಅಸಾಧ್ಯ. ನಾಡಿನ ಪ್ರತಿಯೊಬ್ಬ ಪ್ರಜೆಗೂ ಸಂವಿಧಾನವೇ ಧರ್ಮಗ್ರಂಥವಾಗಲಿ. ಸಂವಿಧಾನದ ಆಶಯಗಳಿಗೆ ಬದ್ಧವಾಗಿ ಬದುಕುವ ಮೂಲಕ ಮನುವಾದವನ್ನು ಹಿಮ್ಮೆಟ್ಟಿಸೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Exit mobile version