Site icon PowerTV

ಬಿ.ಕೆ ಹರಿಪ್ರಸಾದ್ ಮಾನಸಿಕ ಸ್ಥಿತಿ ಸರಿಯಲ್ಲ : ಗೋವಿಂದ ಕಾರಜೋಳ

ಹುಬ್ಬಳ್ಳಿ: ಬಿ.ಕೆ ಹರಿಪ್ರಸಾದ್ ಮಾನಸಿಕ ಸ್ಥಿತಿ ಸರಿಯಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ. 

ಬಿಜೆಪಿಯವರು ಗೋಡ್ಸೆ ಅನುಯಾಯಿಗಳು ಎಂಬ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಸಿದ ಅವರು ಕಾಂಗ್ರೆಸ್ ನಲ್ಲಿ ಲೆಕ್ಕಕ್ಕೆ ಇಲ್ಲದ ನಾಯಕ ಬಿ. ಕೆ. ಹರಿಪ್ರಸಾದ್​ಗೆ ತಮ್ಮ ಪಕ್ಷದಲ್ಲಿ ಮಾನಸಿಕ ಹಿಂಸೆ ಆಗಿದೆ ಹಿಂಸೆ ತಾಳಲಾರದೆ ಈ ರೀತಿಯಾಗಿ ಮಾತನಾಡುತ್ತಿದ್ದಾರೆ ಎಂದರು.

ಹರಿಪ್ರಸಾದ್ ಒಬ್ಬ ಹಿರಿಯ ರಾಜಕಾರಣಿ ನಾಲಿಗೆ ಮೇಲೆ ಹಿಡಿತ ಇರಿಸಿಕೊಂಡು ಮಾತನಾಡಬೇಕು.ಅವರು ಮಾತು ಅವರಿಗೆ ಗೌರವ ತರಲ್ಲ ದೊಡ್ಡವರು ಆಗಲ್ಲ. ಅವರ ವ್ಯಕ್ತಿತ್ವ ಕೂಡ ಬೆಳೆಯಲ್ಲ.ಚಪ್ಪಲಿ ಬೂಟು ನೆಕ್ಕುವುದು ಎಂಬ ಹೇಳಿಕೆ ಸರಿಯಲ್ಲ ಅವರ ಹೀನ ಸಂಸ್ಕ್ರತಿ ತೋರಿಸುತ್ತಿದ್ದಾರೆ ಎಂದು

ನಾವು ಅವರಿಗೆ ಬಹಳ ಬೆಲೆ ಕೊಡಬೇಕಾಗಿಲ್ಲ ದೇಶಕ್ಕೆ ಯಾರು ಏನು ಅ‌ಂತಾ ಗೊತ್ತಿದೆ ಎಂದು ಗುಡುಗಿದ್ದರು.

ಬ್ರಿಟಿಷರ ಬೂಟು ನೆಕ್ಕುತ್ತಿದ್ದವರು ನಮ್ಗೆ ಹೇಳಿಕೊಡಬೇಕಿಲ್ಲ: ಬಿ.ಕೆ. ಹರಿಪ್ರಸಾದ್‌ ಲೇವಡಿ

ಬ್ರಿಟಿಷರ ಬೂಟು ನೆಕ್ಕುತ್ತಿದ್ದವರು ನಮಗೆ ಬುದ್ಧಿಮಾತು ಹೇಳಿಕೊಡಬೇಕಿಲ್ಲ ಎಂದು B.K.ಹರಿಪ್ರಸಾದ್ ಹರಿಹಾಯ್ದಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿ, ಕಾಂಗ್ರೆಸ್‌ ಟಿಪ್ಪುಸುಲ್ತಾನ್ ಪಾರ್ಟಿಯಲ್ಲ. ನಾವು ಬ್ರಿಟಿಷರ ವಿರುದ್ಧ ಹೋರಾಡಿದವರ ಪರ ಇರುವವರೇ ಹೊರೆತು ಅವರ ಬೂಟು ನೆಕ್ಕಿದವರ ಪರವಲ್ಲವೆಂದು ಹೇಳಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದವರಲ್ಲಿ BJP ತಮ್ಮ ಪಕ್ಷದ ಒಬ್ಬರ ಹೆಸರು ಹೇಳಲಿ, ಖಂಡಿತ  ಸಿಗೋದಿಲ್ಲ. ಅವರೆಲ್ಲ ಗೋಡ್ರೆ ಅನುಯಾಯಿಗಳು ಎಂದಿದ್ದಾರೆ.

ಇದನ್ನೂ ಓದಿ: ಯತ್ನಾಳ್​ ವಿರುದ್ಧ ಯಾವುದೇ ದೂರು ನೀಡುವುದಿಲ್ಲ: ಬಿ.ಎಸ್. ಯಡಿಯೂರಪ್ಪ   

 

ಹಿಜಾಬ್ ಮತ್ತು ಬುರ್ಕಾ ನಡುವೆ ಸಾಕಷ್ಟು ವ್ಯತ್ಯಾಸ ಇದೆ. ಹಿಜಬ್ ಅನ್ನೋದು ತಲೆ ಮತ್ತೆ ಎದೆ ಭಾಗ ಮುಚ್ಚಿಕೊಳ್ಳೊಕೆ ಇರೋದು. ಈಗಾಗಲೇ ಕೆಲವು ಶಾಲಾ ಕಾಲೇಜುಗಳಲ್ಲಿ ಇದೆ. ಬುರ್ಕಾ ಅನ್ನೋದು ಸಂಪೂರ್ಣ ದೇಹ ಮುಚ್ಚಿಕೊಳ್ಳೋದು. ಶಾಲಾ ಕಾಂಪೌಂಡ್‌ವರೆಗೂ ಬುರ್ಕಾ ಆ ನಂತರ ಹಿಜಬ್ ಇರಬೇಕು ಅನ್ನೋದು ನನ್ನ ಕಲ್ಪನೆ ಎಂದು ಹೇಳಿದ್ದಾರೆ.

 

Exit mobile version