Site icon PowerTV

ರಾಮಮಂದಿರ ಉದ್ಘಾಟನಾ ಸಮಾರಂಭಕ್ಕೆ ನಟ ಯಶ್​ಗೆ ಆಹ್ವಾನ!

ನವದೆಹಲಿ : ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಸ್ಯಾಂಡಲ್​ವುಡ್​ನ ರಾಕಿಂಗ್ ಸ್ಟಾರ್ ಯಶ್​ ಅವರಿಗೂ ಆಹ್ವಾನಿಸಲಾಗಿದೆ ಎಂದು ವರದಿಯಾಗಿದೆ.

ಇತ್ತೀಚೆಗೆ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಅವರಿಗೆ ಆಹ್ವಾನ ನಿಡಲಾಗಿತ್ತು. ಇದೀಗ ನಟ ಯಶ್​ಗೂ ಕೂಡ ಆಹ್ವಾನ ಬಂದಿದೆ. ರಿಷಬ್ ಶೆಟ್ಟಿ ಹಾಗೂ ಯಶ್ ಉದ್ಘಾಟನೆ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ದಕ್ಷಿಣ ಭಾರತದ ಕೆಲವು ನಟರಿಗೆ ಮಾತ್ರ ರಾಮ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಲಾಗಿದೆ. ಸೂಪರ್ ಸ್ಟಾರ್ ರಜನಿಕಾಂತ್, ಮೋಹನ್ ಲಾಲ್, ಚಿರಂಜೀವಿ, ಅಮಿತಾಭ್ ಬಚ್ಚನ್, ಮಾಧುರಿ ದೀಕ್ಷಿತ್, ಅನುಪಮ್ ಖೇರ್, ಅಕ್ಷಯ್ ಕುಮಾರ್, ರಾಜಕುಮಾರ್ ಹಿರಾನಿ, ಸಂಜಯ್ ಲೀಲಾ ಬನ್ಸಾಲಿ, ರೋಹಿತ್ ಶೆಟ್ಟಿಗೂ ಆಹ್ವಾನ ನೀಡಲಾಗಿದೆ.

ವೀರೇಂದ್ರ ಹೆಗ್ಗಡೆ, ಸಿದ್ಧಗಂಗಾ ಶ್ರೀಗೆ ಆಹ್ವಾನ

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ, ಸಿದ್ಧಗಂಗಾ ಶ್ರೀ, ಶೃಂಗೇರಿಯ ವಿಭುಶೇಖರ ತೀರ್ಥ ಸ್ವಾಮೀಜಿ, ಆದಿಚುಂಚನಗಿರಿಯ ನಿರ್ಮಲಾನಂದ ಸ್ವಾಮೀಜಿ, ಪುತ್ತೂರು, ಅದಮಾರು, ಶ್ರವಣ ಬೆಳಗೋಳ, ಬೇಲಿಮಠ, ರಂಭಾಪುರಿ ಶ್ರೀ ಹೀಗೆ ಹಲವು ಮಠಗಳ ಸ್ವಾಮೀಜಿಗಳಿಗೆ ಆಹ್ವಾನ ನೀಡಲಾಗಿದೆ ಎಂದು ತಿಳಿದುಬಂದಿದೆ.

ಉತ್ತರ ಪ್ರದೇಶದಲ್ಲಿ ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗಿರುವ ಶ್ರೀರಾಮ ಮಂದಿರ ಇದೇ 2024ರ ಜನವರಿ 22ರಂದು ಲೋಕಾರ್ಪಣೆ ಆಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮಂದಿರವನ್ನು ಉದ್ಘಾಟನೆ ಮಾಡಲಿದ್ದಾರೆ. ರಾಮಮಂದಿರದ ಗರ್ಭಗುಡಿಯಲ್ಲಿ ವಿಗ್ರಹವನ್ನು ಇರಿಸುವ ನಿರೀಕ್ಷೆಯಿದೆ.

Exit mobile version