Site icon PowerTV

ಪೋಷಕರ‌‌ ಎದುರೇ ಮಕ್ಕಳ ಮೇಲೆ ಟ್ರಾಕ್ಟರ್ ಹತ್ತಿಸಿದ ಕ್ರೂರಿ

ರಾಮನಗರ‌: ಪೋಷಕರ ಮೇಲಿನ ಸಿಟ್ಟಿನಿಂದ ವ್ಯಕ್ತಿಯೊಬ್ಬ ಮಕ್ಕಳ ಮೇಲೆ ಟ್ರ್ಯಾಕ್ಟರ್​ ಹತ್ತಿಸಿರುವ ಘಟನೆ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಚಿಕ್ಕಕಲ್ಯಾ ಗ್ರಾಮದಲ್ಲಿ ನಡೆದಿದ್ದು,ತಡವಾಗಿ ಬೆಳಕಿಗೆ ಬಂದಿದೆ.

ರಸ್ತೆ ಬಿಡುವ ವಿಚಾರವಾಗಿ ಶಿವಮೂರ್ತಿ ಎಂಬಾತ ನಾಗರಾಜು ಕುಟುಂಬದ ಜೊತೆ ಗಲಾಟೆ ಮಾಡ್ಕೊಂಡಿದ್ದ. ಲಾಂಗ್​ ಹಿಡಿದು ಹಲ್ಲೆ ಮಾಡೋಕು ಮುಂದಾಗಿದ್ದ ಎನ್ನಲಾಗ್ತಿದೆ. ಅದಲ್ಲದೇ ಏಕಾಏಕಿ ನಾಗರಾಜು ಕುಟುಂಬದ ಮಕ್ಕಳ ಮೇಲೆ ಟ್ರ್ಯಾಕ್ಟರ್​ ಹರಿಸಿದ್ದಾನೆ.

ಇದನ್ನೂ ಓದಿ: ಬರಗಾಲ ಬರ್ಲಿ ಅಂತ ರೈತರಿಗೆ ಆಸೆ ಇರುತ್ತೆ: ನಾಲಗೆ ಹರಿಬಿಟ್ಟ ಸಚಿವ ಶಿವಾನಂದ ಪಾಟೀಲ್

ಪರಿಣಾಮ ಮಕ್ಕಳ ಕಾಲು, ಹೊಟ್ಟೆ ಭಾಗಕ್ಕೆ ಸಂಪೂರ್ಣ ಗಾಯವಾಗಿದ್ದು, ತುಮಕೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಗಾಗಿ ಬಲೆ ಬೀಸಿದ್ದಾರೆ. ಆದರೆ ಘಟನೆ ನಡೆದು 24 ಗಂಟೆ ಕಳೆದರೂ ಆರೋಪಿಯನ್ನು ಬಂಧಿಸಿಲ್ಲ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

Exit mobile version