Site icon PowerTV

ಸಾರ್ವಜನಿಕ ರಸ್ತೆ ಕೊರೆದು ‘ಲುಲು ಮಾಲ್’​ಗೆ ಸುರಂಗ ಮಾರ್ಗ : ಸಾರ್ವಜನಿಕರ ಆಕ್ರೋಶ

ಬೆಂಗಳೂರು : ಸಾರ್ವಜನಿಕ ರಸ್ತೆ ಕೊರೆದು ಲುಲು ಮಾಲ್​ಗೆ ಸುರಂಗ ಮಾರ್ಗ ಮಾಡಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿದ್ದಾರೆ. ‘ಲೂಟಿ ಮಾಲ್.. ಸಾರ್ವಜನಿಕ ರಸ್ತೆ ಕೊರೆದು ನಿಮ್ಮ ಖಾಸಗಿ ಲುಲು ಮಾಲ್​ಗೆ ಸುರಂಗ ಮಾರ್ಗ ಮಾಡಿದ್ದೀರಲ್ಲ..? ಲುಲು ಮಾಲ್ ನಿಮ್ಮದಿರಬಹುದು.. ರಸ್ತೆ ನಿಮ್ಮದಾ..?’ ಎಂದು ಪ್ರಶ್ನಿಸಿದ್ದಾರೆ.

ಮುಂದುವರಿದು, ‘ಅದೂ ಕನ್ನಡ ಬಾರದ ಹಿಂದಿ ಅಯೋಗ್ಯರನ್ನ ನೇಮಕ ಮಾಡಿದ್ದೀರಿ. ನೀವು ಕನ್ನಡ ಬಗ್ಗೆ ಉದ್ದುದ್ದ ಮಾತನಾಡೋದಾ? ನಾನೇ ಬೆಂಗಳೂರು ನಗರಾಭಿವೃದ್ಧಿ ಸಚಿವ, ನನ್ನ ಯಾವನ್ ಕೇಳ್ತಾನೆ ಅನ್ನೋ ಧಿಮಾಕ..?’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​ಗೆ ಟ್ಯಾಗ್ ಮಾಡಿ ಕಟುವಾಗಿಯೇ ತಿವಿದಿದ್ದಾರೆ.

ಇದು ಬಿಜೆಪಿ ಇದ್ದಾಗ ಆಗಿದ್ದು

‘ನನಗೂ ಗೊತ್ತಿದೆ ಇದು ಬಿಜೆಪಿ ಇದ್ದಾಗ ಆಗಿದ್ದು ಅಂತ. ನನ್ನ ಪ್ರಶ್ನೆ ಒಟ್ಟಾರೆ ವ್ಯವಸ್ಥೆಗೆ, ಅಡ್ಜಸ್ಟ್ಮೆಂಟ್ ರಾಜಕಾರಣಿಗಳ ಈ ಒಳ ಒಪ್ಪಂದದ ಬಗ್ಗೆ. ಮೇಲ್ನೋಟಕ್ಕೆ ಅವರು ಇವರನ್ನ ,ಇವರು ಅವರನ್ನ ಬೈದಾಡಿಕೊಂಡು ಒಳಗೊಳಗೇ ಇಂಥ ಕೆಲಸಗಳಿಗೆ ಸಹಕಾರ ನೀಡಿರೋದು ಇದೇ ಮೊದಲಲ್ಲ. ಅಧಿಕಾರ ಇದೆ ಎಂದಾಕ್ಷಣ ಸಾರ್ವಜನಿಕರ ಆಸ್ತಿ ಕಬಳಿಸೋದು ಖಂಡನೀಯ’ ಎಂದು ಅಸಮಾಧಾನ ಹೊರಹಾಕಿದ್ದಾರೆ.

Exit mobile version