Site icon PowerTV

ಬಿಗ್ ಅಪ್ಡೇಟ್.. ಹಾರ್ದಿಕ್ ಪಾಂಡ್ಯ ಕಂಬ್ಯಾಕ್ ಫಿಕ್ಸ್

ಬೆಂಗಳೂರು : ಭಾರತದ ಸ್ಟಾರ್ ಆಲ್​ರೌಂಡರ್ ಹಾಗೂ ಮುಂಬೈ ಇಂಡಿಯನ್ಸ್​ ತಂಡದ ನೂತನ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅಭಿಮಾನಿಗಳಿಗೆ ಗುಡ್​ ನ್ಯೂಸ್ ಸಿಕ್ಕಿದೆ.

ಗಾಯದಿಂದ ಗುಣಮುಖರಾಗದ ಕಾರಣ ಮುಂದಿನ ವರ್ಷ ನಡೆಯುವ ಅಫ್ಘಾನಿಸ್ತಾನ ಹಾಗೂ ಐಪಿಎಲ್-2024 ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಆಡುವುದು ಅನುಮಾನ ಎಂದು ವರದಿಯಾಗಿತ್ತು. ಆದರೆ, ಇದಕ್ಕೆ ತೆರೆ ಬಿದ್ದಿದೆ.

ಹಾರ್ದಿಕ್ ಪಾಂಡ್ಯ ಗಾಯದಿಂದ ಚೇತರಿಸಿಕೊಂಡಿದ್ದು ಕಣಕ್ಕಿಳಿಯಲಿದ್ದಾರೆ ಎಂದು ವರದಿಯಾಗಿದೆ. ಸದ್ಯಕ್ಕೆ ಅವರ ಕಂಬ್ಯಾಕ್​ ಬಗ್ಗೆ ಇದ್ದ ಅನುಮಾನ ದೂರವಾದಂತಾಗಿದೆ. ಆದರೆ, ಅಧಿಕೃತ ಮಾಡಹಿತಿ ಇನ್ನಷ್ಟೇ ಬರಬೇಕಿದೆ. ವಿಶ್ವಕಪ್​-2024 ವೇಳೆ ಪಾಂಡ್ಯ ಗಾಯದ ಸಮಸ್ಯೆತೆ ತುತ್ತಾಗಿದ್ದರು.

ಭಾರತ ತಂಡಕ್ಕೆ ಗಾಯದ ಸಮಸ್ಯೆ ಬಿಟ್ಟು ಬಿಡದಂತೆ ಕಾಡುತ್ತಿದೆ. ಹಾರ್ದಿಕ್ ಪಾಂಡ್ಯ ಬಳಿಕ ಸೂರ್ಯಕುಮಾರ್ ಯಾದವ್ ಸಹ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದಾರೆ. ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಸಹ ಇಂಜುರಿಗೆ ಒಳಗಾಗಿದ್ದು, ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಿಂದ ಹೊರಗುಳಿದಿದ್ದಾರೆ.

Exit mobile version