Site icon PowerTV

28 ಸ್ಥಾನ ಗೆಲ್ಲಿಸ್ತೀನಿ ಅಂತ ಹೇಳಿದ್ದಾರೆ, ಗೆಲ್ಲಿಸಬೇಕು ಅವರು : BSYಗೆ ಯತ್ನಾಳ್ ಟಕ್ಕರ್

ಕಲಬುರಗಿ : ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲಿಸುತ್ತೇನೆ ಅಂತ ಹೇಳಿದ್ದಾರೆ, ಗೆಲ್ಲಿಸಬೇಕು ಅವರು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಶಾಸಕ‌ ಬಸವನಗೌಡ ಪಾಟೀಲ್ ಯತ್ನಾಳ್ ಟಕ್ಕರ್ ಕೊಟ್ಟಿದ್ದಾರೆ.

ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಲೋಕಸಭೆ ಚುನಾವಣೆ ಮುಗಿದ ಬಳಿಕ ಮಧ್ಯಪ್ರದೇಶದ ಹಾಗೆ ರಾಜ್ಯದಲ್ಲಿಯೂ ಬದಲಾಗುತ್ತೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಉತ್ತರ ಕರ್ನಾಟಕಕ್ಕೆ ಉಪಾಧ್ಯಕ್ಷ ,ಕಾರ್ಯದರ್ಶಿ ನಮಗೆ ಕೊಡ್ತಾರೆ. ಬೆಣ್ಣೆ ಎಲ್ಲಾ ಯಡಿಯೂರಪ್ಪ, ಮಜ್ಜಿಗೆ ಎಲ್ಲಾ ಉತ್ತರ ಕರ್ನಾಟಕಕ್ಕೆ. ರಾಜ್ಯಾಧ್ಯಕ್ಷ, ಪರಿಷತ್ ಸದಸ್ಯ ಎಲ್ಲರೂ ಅವರು ಇರ್ತಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಈ ಸುದ್ದಿ ಓದಿದ್ದೀರಾ? : ಯತ್ನಾಳ್​ ವಿರುದ್ಧ ಯಾವುದೇ ದೂರು ನೀಡುವುದಿಲ್ಲ: ಬಿ.ಎಸ್. ಯಡಿಯೂರಪ್ಪ

ಚಿಲ್ಲರೆ ರಾಜಕಾರಣ ಮಾಡ್ತಿದ್ದಾರೆ

ಲೋಕಸಭೆ ದಾಳಿಯನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಿರುದ್ಯೋಗದಿಂದ ಮಾಡಿದ್ದಾರೆ ಅಂತ ಹೇಳ್ತಾರೆ. ಕಾಮನ್ ಸೆನ್ಸ್ ಇಲ್ಲದ ಹೇಳಿಕೆ ಕೊಡುತ್ತಿದ್ದಾರೆ. ಕಾಶ್ಮೀರದಲ್ಲಿ ಯಾಕೆ ಬಾಂಬ್ ಬಿಳ್ತಿಲ್ಲ? ಅದ್ಯಾವುದು ನೋಡದೆ ಚಿಲ್ಲರೆ ರಾಜಕಾರಣ ಮಾಡ್ತಿದ್ದಾರೆ ಎಂದು ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ.

Exit mobile version