Site icon PowerTV

ಅಯೋಧ್ಯೆ ರೀತಿ ಅಂಜನಾದ್ರಿ ಅಭಿವೃದ್ಧಿಪಡಿಸುವೆ: ಗಾಲಿ ಜನಾರ್ಧನ್​ ರೆಡ್ಡಿ!

ಕೊಪ್ಪಳ: ಅಯೋದ್ಯೆಯಂತೆ ಅಂಜನಾದ್ರಿಯೂ ಅಭಿವೃದ್ದಿ ಪಡಿಸುತ್ತೇನೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಭರವಸೆ ನೀಡಿದರು.

ಕೊಪ್ಪಳದಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಲೋಕಕಲ್ಯಾಣಕ್ಕಾಗಿ ಹನುಮ‌ಮಾಲೆ ಹಾಕಿಕೊಂಡಿದ್ದೆ. ಈ ಬಾರಿಯೂ ಹನುಮ ಮಾಲೆ ಹಾಕಿಕೊಂಡಿದ್ದೇನೆ. ಗಂಗಾವತಿ ಕ್ಷೇತ್ರವನ್ನು ಮತ್ತೆ ಅಭಿವೃದ್ದಿಗಾಗಿ ಸಂಕಲ್ಪ ಮಾಡಿದ್ದೇನೆ. ಕೇಂದ್ರ ಸರ್ಕಾರ ಅಂಜನಾದ್ರಿಗೆ ಅನುದಾನ ನೀಡುತ್ತಾರೆ ಎಂಬ ವಿಶ್ವಾಸವಿದೆ.

ಇದನ್ನೂ ಓದಿ: ಪ್ರತಿಷ್ಟಿತ ಹೋಟೆಲ್​ ನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ!

ಜನವರಿ 22 ರಂದು ಅಯೋದ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆ ಅಂಜನಾದ್ರಿಯಲ್ಲೂ ಪೂಜೆ ನಡೆಯಲಿದೆ. ಭಕ್ತರಿಗೆ ಅನುಕೂಲವಾಗುವಂತೆ ಇದರ ನೇರ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗುತ್ತದೆ. ಇನ್ನು ಆರು ತಿಂಗಳಲ್ಲಿ ಅಂಜನಾದ್ರಿಯಲ್ಲಿ ರೂಪ್ ವೇ ನಿರ್ಮಾಣವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Exit mobile version