Site icon PowerTV

ಪಾನ್ ಅಂಗಡಿಯಲ್ಲಿ ಹುಲಿ ಚರ್ಮ ಹೋಲುವ ಚರ್ಮ ಪತ್ತೆ

ಯಾದಗಿರಿ : ಹುಲಿ ಉಗುರಿನ ಪ್ರಕರಣ ಬೆನ್ನಲ್ಲೇ ಹುಲಿ ಚರ್ಮದ ದಂಧೆ ಜೋರಾಗಿಯೇ ಸದ್ದು ಮಾಡಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ತಿಂಥಣಿ ಗ್ರಾಮದಲ್ಲಿ ಪತ್ತೆಯಾಗಿದೆ.

ತಿಂಥಣಿ ಗ್ರಾಮದ ಶ್ರೀ ಈಶ್ವರ ದೇವಸ್ಥಾನದ ಮುಂಭಾದಲ್ಲಿರುವ ಪಾನ್ ಅಂಗಡಿಯ ಮೇಲ್ಚಾವಣಿಯಲ್ಲಿ ಇರಿಸಲಾಗಿತ್ತು ಎನ್ನಲಾಗಿದೆ. ನೀಲಿ ಪ್ಲಾಸ್ಟಿಕ್ ಕವರ್ ನಲ್ಲಿ ಹುಲಿ ಚರ್ಮ ಹೋಲುವ ಚರ್ಮ ಪತ್ತೆಯಾಗಿದೆ.

ವಿಷಯ ಸಾರ್ವಜನಿಕ ವಲಯದಲ್ಲಿ ಚರ್ಚೆ ಯಾಗುತ್ತಿದ್ದಂತೆ ಸ್ಥಳಕ್ಕೆ ಸುರಪುರ ಪಿಎಸ್​ಐ ಭೇಟಿ ನೀಡಿದ್ದು ಹುಲಿ ಚರ್ಮ ನಕಲಿನೋ ಅಥವಾ ಅಸಲಿನೋ ಎಂದು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇನ್ನೂ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಹುಲಿ ಚರ್ಮದ ಪ್ರಕರಣ ಸುರಪುರ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

Exit mobile version