Site icon PowerTV

ಕಲಬೆರೆಕೆ ಗೊಬ್ಬರ ವಿತರಣೆ; ರೈತರು ಆಕ್ರೋಶ!

ಉಡುಪಿ: ಉಡುಪಿಯಲ್ಲಿ ಕಲಬೆರೆಕೆ ಗೊಬ್ಬರ ವಿತರಣೆ ಹಿನ್ನಲೆ ಕೃಷಿಕರ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಕಾರ್ಕಳ ತಾಲೂಕಿನ ಹೊಸ್ಮಾರು ಶ್ರೀಶ ಎಂಟರ್ ಪ್ರೈಸ್​​​ನಿಂದ ವಿತರಿಸಿದ ಗೊಬ್ಬರದಲ್ಲಿ
ಕಳಪೆ ಹಾಗೂ ಕಲಬೆರೆಕೆ ಇರುವುದು ಕಂಡು ಬಂದಿದೆ. ಅಡಿಕೆ ನೀಡಿದ ಗೊಬ್ಬರದಲ್ಲಿ ಬಾರೀ ಕಲ್ಲು, ಮಣ್ಣು ಕಂಡುಬಂದಿದೆ. ಕಲ್ಲು‌ಮಣ್ಣು ಕಸ ಕಲಬೆರೆಕೆ ಬಗ್ಗೆ ವಿಡಿಯೋ ಮಾಡುವ ಮೂಲಕ ಕೃಷಿ ಇಲಾಖೆಯ ವಿರುದ್ದ ರೈತ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಹಿಜಾಬ್ ವಿಚಾರ ಸಿದ್ದರಾಮಯ್ಯರದ್ದು ಬೇಜವಾಬ್ದಾರಿ ಹೇಳಿಕೆ : ಬಿವೈ ವಿಜಯೇಂದ್ರ ಕಿಡಿ!

ಇನ್ನು, ವಿಡಿಯೋ ಹರಿ ಬಿಟ್ಟ ಬೆನ್ನಲ್ಲೇ ಉಡುಪಿ ಕೃಷಿ ಇಲಾಖೆ ಅಧಿಕಾರಿಗಳು ಸ್ಟೋರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗೋದಾಮಿನಲ್ಲಿ ಬೀಡುಬಿಟ್ಟ ಅರೋಗ್ಯ ಅಧಿಕಾರಿಗಳ ತಂಡ ಗೊಬ್ಬರ ಮಾರಾಟ ಮಾಡದಂತೆ ನೋಟಿಸ್​​​ ನೀಡಿದ್ದಾರೆ.

Exit mobile version