Site icon PowerTV

ಓಂ ಶಕ್ತಿ ದೇಗುಲಕ್ಕೆ ಹೋಗುತ್ತಿದ್ದ ಬಸ್‌ ಪಲ್ಟಿ: 50 ಜನರಿಗೆ ಗಾಯ

ಬೆಂಗಳೂರು: ತಮಿಳುನಾಡಿನ ಓಂ ಶಕ್ತಿ ದೇಗುಲಕ್ಕೆ ತೆರಳುತ್ತಿದ್ದ ಬಸ್ ಅಪಘಾತಕ್ಕೀಡಾಗಿದ್ದು, 50ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಬೆಳಗ್ಗೆ 5.30 ರ ಸುಮಾರಿಗೆ ಬೆಂಗಳೂರು ಹೊರವಲಯದ ಆನೇಕಲ್‌ನ ಬಿದರಗುಪ್ಪೆಯ ಬಳಿ ಖಾಸಗಿ ಬಸ್ ಕೆರೆಯ ಹಳ್ಳಕ್ಕೆ ಬಿದ್ದಿದೆ. ಗಾಯಗೊಂಡವರನ್ನು ಆಕ್ಸ್‌ಫರ್ಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅದೃಷ್ಟವಶಾತ್ ಯಾವುದೇ ಸಾವು ಸಂಭವಿಸಿಲ್ಲ.

ಬಸ್‌ನಲ್ಲಿದ್ದ ಮಾಲಾಧಾರಿಗಳ ಬಟ್ಟೆಗಳು ಹಾಗೂ ವಸ್ತುಗಳೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

Exit mobile version