Site icon PowerTV

ನಾಳೆ ಲುಂಗಿ, ಶಾಲು ಹಾಕ್ಕೊಂಡು ಬಂದರೆ ಬಿಡ್ತಾರಾ? : ಶಾಸಕ ಭರತ್ ಶೆಟ್ಟಿ

ಮಂಗಳೂರು : ಹಿಜಾಬ್ ನಿಷೇಧ ಹಿಂಪಡೆಯುವ ಮುಖ್ಯಮಂತ್ರಿ ಸಿದ್ದರಾಮಯ್ಯರ ಹೇಳಿಕೆಗೆ ಬಿಜೆಪಿ ಶಾಸಕ ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ನಾಳೆ ಮುಂಡಾಸು, ಲುಂಗಿ, ಶಾಲು ಹಾಕಿಕೊಂಡು ಬಂದರೆ ಬಿಡುತ್ತಾರೆಯೇ? ಎಂದು ಪ್ರಶ್ನಿಸಿದ್ದಾರೆ.

ಶಿಕ್ಷಣ ಸಂಸ್ಥೆಯಲ್ಲಿ ಎಲ್ಲರೂ ಸಮಾನರು ಎಂಬ ಕಲ್ಪನೆಯಡಿ ಸಮವಸ್ತ್ರ ವ್ಯವಸ್ಥೆ ಇರುವುದು. ಸಮವಸ್ತ್ರ ಬಿಟ್ಟು ತಮಗೆ ಬೇಕಾದ ರೀತಿ ಬಟ್ಟೆ ತೊಡಲು ಅವಕಾಶ ನೀಡುತ್ತಾರೆಯೇ? ಅಲ್ಪಸಂಖ್ಯಾತರಿಗೆ ಮಾತ್ರ ಹಿಜಾಬ್ ಧರಿಸಲು ಅವಕಾಶ ನೀಡುವುದು ಎಷ್ಟು ಸರಿ? ಹಿಜಾಬ್ ನಿಷೇಧ ಹೈಕೋರ್ಟ್ ಒಪ್ಪಿದ್ದು ಈಗ ವಿಷಯ ಸುಪ್ರೀಂ ಕೋರ್ಟಿನಲ್ಲಿದೆ. ಇದರ ಮಧ್ಯೆ ನಿಷೇಧ ವಾಪಸ್ ಪಡೆಯುವುದು ಕೋರ್ಟಿಗೆ ಅವಮಾನ ಅಲ್ಲವೇ? ಎಂದು ಗರಂ ಆಗಿದ್ದಾರೆ.

ಗೋಹತ್ಯೆ ನಿಷೇಧವನ್ನೂ ವಾಪಸ್ ಮಾಡ್ತಿರಾ?

ಕಾಂಗ್ರೆಸ್ ಮೂರು ರಾಜ್ಯಗಳಲ್ಲಿ ಸೋತು ಸುಣ್ಣವಾಗಿದೆ. ಈಗ ಜನರ ಗಮನ ಬೇರೆಡೆ ಸೆಳೆಯಲು ನೋಡುತ್ತಿದೆ. ಹಿಜಾಬ್ ಹೆಸರಲ್ಲಿ ಜನರ ನಡುವೆ ಗೊಂದಲ ಎಬ್ಬಿಸುವುದಕ್ಕೆ ಕಾಂಗ್ರೆಸ್ ಮುಂದಾಗಿದೆ. ಸಿಎಂ ಸಿದ್ದರಾಮಯ್ಯರ ಹೇಳಿಕೆಯನ್ನು ಬಿಜೆಪಿ ಖಂಡಿಸುತ್ತದೆ. ಮುಂದೆ ಗೋಹತ್ಯೆ ನಿಷೇಧವನ್ನೂ ವಾಪಸ್ ಮಾಡ್ತಿವಿ ಎನ್ನುತ್ತಾರೆ. ಶಿಕ್ಷಣ ಸಂಸ್ಥೆಯ ಒಳಗಾದರೂ ಎಲ್ಲರೂ ಸಮಾನರು ಎನ್ನುವುದನ್ನು ತೋರಿಸುವುದು ಬಿಜೆಪಿ ನಿಲುವು. ಹಿಜಾಬ್ ವಾಪಸ್ ನಿಂದ ಆಗಬಹುದಾದ ಘಟನೆಗಳಿಗೆ ಕಾಂಗ್ರೆಸ್ ನೇರ ಹೊಣೆ ಎಂದು ಶಾಸಕ ಭರತ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

Exit mobile version