Site icon PowerTV

ಕುವೆಂಪು ವಿವಿ ಪ್ರಭಾರ ಕುಲಪತಿ ವಿರುದ್ಧ ಸುಳ್ಳು ಜಾತಿಪತ್ರ ಸಲ್ಲಿಕೆ ಆರೋಪ!

ಶಿವಮೊಗ್ಗ: ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಕುವೆಂಪು ವಿವಿಯಲ್ಲಿ ಪ್ರಭಾರ ಕುಲಪತಿ ಪ್ರೊ.S.ವೆಂಕಟೇಶ್‍ ಪ್ರಾಧ್ಯಾಪಕ ಹುದ್ದೆ ಗಿಟ್ಟಿಸಿದ್ದಾರೆಂಬ ಆರೋಪ ಕೇಳಿ ಬಂದಿದ್ದು ಇವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಲಾಗಿದೆ.

ಪ್ರಾಧ್ಯಾಪಕ ಪ್ರೊ.S.ವೆಂಕಟೇಶ್​​ ಪರಿಶಿಷ್ಟ ಪಂಗಡದ ಸುಳ್ಳು ಜಾತಿ ಪ್ರಮಾಣ ಪತ್ರ ನೀಡಿ ಸ್ನಾತಕೋತ್ತರ ವಾಣಿಜ್ಯ ಶಾಸ್ತ್ರ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆಂದು ಜೈ ಭೀಮ್ ಕನ್ನಡ ಜಾಗೃತಿ ವೇದಿಕೆ ಅಧ್ಯಕ್ಷ ಮಂಜುನಾಥ್​ ಈ ಕುರಿತು ಗಂಭೀರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಕಲಬೆರೆಕೆ ಗೊಬ್ಬರ ವಿತರಣೆ; ರೈತರು ಆಕ್ರೋಶ!

ಸುಳ್ಳು ಪ್ರಮಾಣಪತ್ರದಿಂದಾಗಿ ಕುವೆಂಪು ವಿವಿಯಲ್ಲಿ ಪ್ರಭಾರ ಕುಲಪತಿಗಳಾಗಿರುವ ಇವರು ಪರಿವಾರ ಜಾತಿಗೆ ಸೇರಿದವರಾಗಿದ್ದು ಪರಿಶಿಷ್ಟ ಪಂಗಡದ ಸುಳ್ಳು ಜಾತಿ ಪ್ರಮಾಣಪತ್ರ ನೀಡಿದ್ದಾರೆ ಹೀಗಾಗಿ ಕೂಡಲೇ ಅವರನ್ನು ಪ್ರಾಧ್ಯಾಪಕ ಹುದ್ದೆಯಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.

Exit mobile version