Site icon PowerTV

ಎಣ್ಣೆ ಜಾಸ್ತಿ ಕುಡಿಯೊಲ್ಲ ಎಂದಿದ್ದಕ್ಕೆ ಕೊಲೆ ಮಾಡಿದ ಸ್ನೇಹಿತ

ಬೆಂಗಳೂರು: ಪಾರ್ಟಿಗೆ ಕುಳಿತ ಗೆಳೆಯ ಎಣ್ಣೆ ಜಾಸ್ತಿ ಕುಡಿಯೊಲ್ಲ ಎಂದಿದ್ದಕ್ಕೆ ಕೊಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಜಿತೇಂದ್ರ ಕೊಲೆಯಾದ ದುರ್ದೈವಿಯಾಗಿದ್ದು, ಬಾಬು ಕೊಲೆ ಮಾಡಿದ ಸ್ನೇಹಿತ. ರಾತ್ರಿ ಒಟ್ಟಿಗೆ ಗೆಳೆಯರು ಪಾರ್ಟಿಗೆ ಕುಳಿತಿದ್ದರು. ಈ ವೇಳೆ ಜಿತೇಂದ್ರನಿಗೆ ಮದ್ಯ ಸೇವಿಸಿದ ಬಳಿಕವೂ ಮತ್ತಷ್ಟು ಎಣ್ಣೆ ಕುಡಿಯಲು ಒತ್ತಾಯಿಸಿದ್ದ ಆರೋಪಿ ಸ್ನೇಹಿತ. ಆದರೆ ಪಾರ್ಟಿ ಜಾಗದಿಂದ ಹೊರಗೆ ಹೋಗಿ ಜಿತೇಂದ್ರ ಖಾಲಿ ನಿವೇಶನದ ಬಳಿ ಅವಿತಿದ್ದ. ವಿಷಯ ತಿಳಿದ ಆರೋಪಿ ಎಣ್ಣೆ ಮತ್ತಿನಲ್ಲಿ ಕುತ್ತಿಗೆಗೆ ಸ್ಕಾರ್ಫ್ ಬಿಗಿದು ಕರೆತರಲು ಯತ್ನಸಿದ್ದಾನೆ. ಅದೇ ವೇಳೆ ಉಸಿರುಗಟ್ಟಿ ಸಾವನಪ್ಪಿದ್ದಾನೆ. ಗಾಬರಿಯಲ್ಲಿ ಪೊದೆಯಲ್ಲೇ ಮೃತದೇಹ ಬಿಸಾಡಿ ಆರೋಪಿ ಪರಾರಿಯಾಗಿದ್ದ.

ಇದನ್ನೂ ಓದಿ: ಕಲಬೆರೆಕೆ ಗೊಬ್ಬರ ವಿತರಣೆ; ರೈತರು ಆಕ್ರೋಶ!

ಸ್ಥಳಕ್ಕೆ ಬಂದ ಬಾಗಲೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಕೊಲೆ ಆರೋಪಿಯನ್ನ ಬಂಧನಸಿದ್ದಾರೆ.

Exit mobile version