Site icon PowerTV

‘ಕಾಟೇರ’ದಲ್ಲಿ ನಾನು ‘ದೇವರಾಯ’ ರೋಲ್ ಮಾಡಿದ್ದೇನೆ : ಸೀಕ್ರೆಟ್ ರಿವೀಲ್ ಮಾಡಿದ ಜಗಪತಿ ಬಾಬು

ಬೆಂಗಳೂರು : ‘ಕಾಟೇರ’ ಚಿತ್ರದಲ್ಲಿ ನಾನು ‘ದೇವರಾಯ’ ಹೆಸರಿನ ವಿಲನ್ ರೋಲ್‌ನಲ್ಲಿ ಅಭಿನಯಿಸಿದ್ದೇನೆ ಎಂದು ಖ್ಯಾತ ಖಳ ನಟ ಜಗಪತಿ ಬಾಬು ಹೇಳಿದ್ದಾರೆ.

ನಟ ದರ್ಶನ್ ಅಭಿನಯ ಹಾಗೂ ತರುಣ್ ಸುಧೀರ್ ನಿರ್ದೇಶನದ ‘ಕಾಟೇರ’ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿರುವ ಅವರು ತಮ್ಮ ಪಾತ್ರದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

‘ಕಾಟೇರ’ದಲ್ಲಿ ನಾನು ದೇವರಾಯ ಹೆಸರಿನ ಖಳ ನಟನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಈ ಚಿತ್ರವು ಹಳ್ಳಿಯ ಸೊಗಡಿನ ಕಥೆ ಹೊಂದಿದೆ. ಆದರೆ, ವಾಸ್ತವಿಕ ಸಂಗತಿಗಳ ಮೇಲೆ ಕಾಟೇರ ಕಥೆಯಲ್ಲಿ ಬೆಳಕು ಚೆಲ್ಲಲಾಗಿದೆ ಎಂದು ತಿಳಿಸಿದ್ದಾರೆ.

ಕಾಟೇರ ಚಿತ್ರದ ಕಥೆಯನ್ನು ನಾನು ರಿವೀಲ್ ಮಾಡಲು ಆಗಲ್ಲ. ಆದರೆ, ಚಿತ್ರದ ಕಥೆ ಅದ್ಭುತವಾಗಿದೆ. ಕನ್ನಡ ಪ್ರೇಕ್ಷಕರು ಚಿತ್ರಗಳನ್ನು ಚಿತ್ರದಂತೆ ಹಾಗೂ ನಟರನ್ನು (ಕಲಾವಿದ) ನಟರಂತೆ ನೋಡ್ತಾರೆ. ಇದು ಕನ್ನಡಿಗರ ವೈಶಿಷ್ಟ್ಯ. ಕಾಟೇರ ಚಿತ್ರ ಬಿಡುಗಡೆ ಬಳಿಕ ನಿರ್ದೇಶಕ ತರುಣ್ ಸುಧೀರ್ ಇನ್ನೂ ಎತ್ತರಕ್ಕೆ ಏರಲಿದ್ದಾರೆ ಎಂದು ಜಗಪತಿ ಬಾಬು ಕೊಂಡಾಡಿದ್ದಾರೆ.

Exit mobile version