Site icon PowerTV

ಕುಡಿಯುವ ನೀರಿನ ತೆರಿಗೆ ಹೆಚ್ಚಳ, ಜನರಿಗೆ ನೀರು ದುಬಾರಿ

ಬೆಂಗಳೂರು : ಬರಗಾಲದಲ್ಲೂ ಜನರಿಗೆ ರಾಜ್ಯ ಕಾಂಗ್ರೆಸ್​ ಸರ್ಕಾರ ಕುಡಿಯುವ ನೀರಿನ ತೆರಿಗೆ ಹೆಚ್ಚಿಸುವ ಮೂಲಕ ಶಾಕ್ ನೀಡಿದೆ.

ಗೃಹ ಉಪಯೋಗ ಬಳಕೆ ನೀರಿನ ಮೇಲಿನ ತೆರಿಗೆ ಹೆಚ್ಚಳಕ್ಕೆ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಜನರಿಗೆ ಕುಡಿಯುವ ನೀರು ದುಬಾರಿಯಾಗಲಿದೆ. ಕೈಗಾರಿಕೆಗಳಿಗೆ ನೀಡುವ ನೀರಿನ ಜೊತೆಗೆ ಗೃಹ ಬಳಕೆ ನೀರಿಗೂ ತೆರಿಗೆ ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ‌ ನೀಡಿದೆ.

ಈ ಸಂಬಂಧ ಕರ್ನಾಟಕ ನೀರಾವರಿ ನಿಯಮಗಳು 1965ಕ್ಕೆ ತಿದ್ದುಪಡಿಗೆ ಕ್ಯಾಬಿನೆಟ್ ಒಪ್ಪಿಗೆ ನೀಡಿದೆ. ಹೊಸ ತೆರಿಗೆ ಪ್ರಕಾರ ಗೃಹ ಬಳಕೆ ನೀರಿಗೆ ಪ್ರತಿ MCFTಗೆ 320 ರೂ. ತೆರಿಗೆ ಹೆಚ್ಚಳವಾಗಲಿದೆ. ಅದರಂತೆ ಕೈಗಾರಿಕೆಗಳಿಗೆ ಪ್ರತಿ MCFT ಗೆ 3 ಲಕ್ಷ ರೂ. ತೆರಿಗೆ ಹೆಚ್ಚಳವಾಗಲಿದೆ.

ಉಚಿತ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಕಾಂಗ್ರೆಸ್​ ಸರ್ಕಾರ ಕುಡಿಯುವ ನೀರಿಗೂ ತೆರಿಗೆ ಹೆಚ್ಚಳ ಮಾಡುವ ಅವಶ್ಯಕತೆ ಇತ್ತಾ? ಎಂದು ವಿಪಕ್ಷ ನಾಯಕರು ಆಕ್ರೋಶ ಹೊರಹಾಕಿದ್ದಾರೆ.

Exit mobile version