Site icon PowerTV

ವ್ಯಕ್ತಿಗೆ ಚಾಕುವಿನಿಂದ ಇರಿದು ಭೀಕರ ಕೊಲೆ: ದೃಶ್ಯ ಸಿಸಿಟಿವಿಯಲ್ಲಿ ಸೆರೆ!

ಮಂಡ್ಯ: ಇಬ್ಬರು ವ್ಯಕ್ತಿಗಳು ಬಾರ್ ಮುಂದೆ ನಿಂತಿದ್ದ ವ್ಯಕ್ತಿಗೆ ಮನಸ್ಸೊ ಇಚ್ಚೆ ಚಾಕುವಿನಿಂದ ಇರಿದು ಹತ್ಯೆ ಮಾಡಿರೋ ಘಟನೆ ಮಂಡ್ಯ ನಗರದ ಫ್ಯಾಕ್ಟರಿ ಸರ್ಕಲ್ ಬಳಿ ನಡೆದಿದೆ. ಕೊಲೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದೇ ತಿಂಗಳ 14ರ ರಾತ್ರಿ ಮಂಡ್ಯ ನಗರದಲ್ಲಿ ಮರ್ಡರ್ ನಡೆದಿತ್ತು. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕಡಿಲುವಾಗಿಲು ಗ್ರಾಮದ ಗುರು ವಿಲಾಸ್ ಎಂಬಾತನನ್ನ‌ ಹತ್ಯೆ ಮಾಡಲಾಗಿದೆ. ಬಾರ್​​ನಲ್ಲಿ ಕುಡಿದು ಗಲಾಟೆಯಾದ ಬಳಿಕ ಗುರುವಿಲಾಸ್ ಹತ್ಯೆ ಮಾಡಲಾಗಿದೆ.

ಇದನ್ನೂ ಓದಿ: ಹೆಣ್ಣು ಸಿಗದೆ ಅನಾಥಾಶ್ರಮದ ಯುವತಿರೊಂದಿಗೆ ಮದುವೆಯಾದ ಬ್ರಾಹ್ಮಣ ಯುವಕರು!

ಕುಡಿದ ಮೇಲೆ ಬಾರ್ ಮುಂದೆ ಗುರು ವಿಲಾಸ್ ನಿಂತಿರೋದನ್ನ ಗಮನಿಸಿ ಕಾರ್​​​ನಲ್ಲಿ ಬಂದು ಹತ್ಯೆ ಮಾಡಿದ್ದಾರೆ. ಕಡಿಲುವಾಗಿಲು ಗ್ರಾಮದ ಶಿವಕುಮಾರ್, ಮಂಡ್ಯದ ಗುತ್ತಲು ಕಾಲೋನಿಯ ರಾಘವೇಂದ್ರ ಎಂಬುವರಿಂದ ಹತ್ಯೆ ಮಾಡಲಾಗಿದೆ. ಗುರುವಿಲಾಸ್​​ನನ್ನ ಚಾಕುವಿನಿಂದ ಇರಿದು ಮತ್ತೆ ಅದೇ ಕಾರ್​​​ನಲ್ಲಿ ಇಬ್ಬರು ತೆರಳಿದ್ದಾರೆ. ಮಂಡ್ಯದ ಪೂರ್ವ ಪೊಲೀಸ್ ಠಾಣೆ ಪೊಲೀಸರು ಆರೋಪಿಗಳನ್ನ ಬಂಧಿಸಿದ್ದಾರೆ.

Exit mobile version