Site icon PowerTV

ಕುಡಿದ ಮತ್ತಿನಲ್ಲಿ ಪತ್ನಿಯ ಕಣ್ಣು ಕಚ್ಚಿದ ಪತಿರಾಯ 

ಬೆಳ್ತಂಗಡಿ: ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಕಣ್ಣು ಕಚ್ಚಿ ಮಾಂಸ ಹೊರತೆಗೆದು ವಿಕೃತಿ ಮೆರೆದಿದ್ದಾನೆ. 

ಬೆಳ್ತಂಗಡಿ ಸಮೀಪದ ಶಿಶಿಲ ಎಂಬ ಗ್ರಾಮದಲ್ಲಿ ಈ ವಿಕೃತ ಘಟನೆ ನಡೆದಿದೆ. ಮೂಲತಃ ಹಾವೇರಿ ನಿವಾಸಿ ಸುರೇಶ್ ಗೌಡ(55) ಹಲ್ಲೆ ಮಾಡಿದ ವ್ಯಕ್ತಿಯಾಗಿದ್ದಾನೆ.

ಘಡನೆಯ ವಿವರ: 

ಕುಡಿದು ಅಮಲಿನಲ್ಲಿದ್ದ ವ್ಯಕ್ತಿಯು ಸೋಮವಾರ ರಾತ್ರಿ ಪತ್ನಿಯ ಕಣ್ಣಿಗೆ ಮತ್ತು ಮುಖಕ್ಕೆ ಕಚ್ಚಿ ಮಾಂಸ ಹೊರತೆಗೆದಿದ್ದಲ್ಲದೇ, ಹೆಲೈಟ್‌ನಿಂದಲೂ ಹಲ್ಲೆ ನಡೆಸಿದ್ದು, ಆಕೆಯ ಎಡಗಣ್ಣು ಸಂಪೂರ್ಣ ಹಾನಿಗೊಂಡಿದೆ. ತಡೆಯಲು ಬಂದ ಮಗಳ ಮೇಲೂ ಆರೋಪಿ ಹಲ್ಲೆ ನಡೆಸಿದ್ದಾನೆ.

ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಹಲ್ಲೆಗೊಳಗಾದ ಮೋಹಿನಿ (55 ವರ್ಷ) ಹಾಗೂ ಮಗಳು ಪೂಜಾ (19) ಉಜಿರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕೃತ್ಯವೆಸಗಿದ ಬಳಿಕ ಆರೋಪಿಯು ತೋಟದಲ್ಲಿ ಅಡಗಿ ಕುಳಿತಿದ್ದ. ಧರ್ಮಸ್ಥಳ ಠಾಣೆಯ ಎಸ್‌ಐಗಳಾದ ಅನಿಲ್ ಕುಮಾ‌ರ್ ಮತ್ತು ಸಮರ್ಥ ಗಾಣಿಗೇರ ನೇತೃತ್ವದ ತಂಡ ಆರೋಪಿಯನ್ನು ಬಂಧಿಸಿದೆ’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Exit mobile version