Site icon PowerTV

ರಾಜ್ಯದ ಜನತೆಗೆ ಬರ ಪರಿಹಾರ ನೀಡುವಲ್ಲಿ ಸರ್ಕಾರ ಸಂಪೂರ್ಣ ವಿಫಲ!: BY ವಿಜಯೇಂದ್ರ

ಬೆಂಗಳೂರು: ರಾಜ್ಯದೆಲ್ಲೆಡೆ ಬರದ ಛಾಯೆ ಆವರಿಸಿದ್ದರೂ ಬರ ಪರಿಹಾರ ನೀಡುವಲ್ಲಿ ರಾಜ್ಯದ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ ವಿಜಯೇಂದ್ರ ತಿಳಿಸಿದರು.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಅವರು, ರೈತರ ಸಾಲ ಮನ್ನಾ ಮಾಡಿ ಎಂದರೆ ಸದನದಲ್ಲಿ ಅಸಡ್ಡೆ ಉತ್ತರ ನೀಡಿದ್ದ ಮುಖ್ಯಮಂತ್ರಿಗಳಿಗೆ ರೈತರ ಆತ್ಮಹತ್ಯೆ ಪ್ರಕರಣಗಳು ಕಾಣಿಸುತ್ತಿಲ್ಲವೇ? ಬೆಳೆ ಹಾನಿ, ಸಾಲಬಾಧೆ ಕಾರಣಗಳಿಂದಾಗಿ ಕಳೆದ 8 ತಿಂಗಳಲ್ಲಿ 456 ರೈತರು ನೇಣಿಗೆ ಶರಣಾಗಿರುವುದು ಆತಂಕಕಾರಿ ಬೆಳವಣಿಗೆ. ಅದರಲ್ಲಿಯೂ ಉತ್ತರ ಕರ್ನಾಟಕ ಭಾಗದ ರೈತರ ಆತ್ಮಹತ್ಯೆ ಪ್ರಕರಣಗಳೇ ಹೆಚ್ಚು ದಾಖಲಾಗಿವೆ.

ಇದನ್ನೂ ಓದಿ: ಬರ ಪರಿಹಾರ ಶೀಘ್ರ ಬಿಡುಗಡೆಗೊಳಿಸುವಂತೆ ಪ್ರಧಾನಿಗೆ ಸಿದ್ದರಾಮಯ್ಯ ಮನವಿ!

ಕಾಂಗ್ರೆಸ್ ನ ಮರುಳುಗೊಳಿಸುವ ಆಶ್ವಾಸನೆಗಳನ್ನು ನಂಬಿ ಮತ ನೀಡಿದ ಆ ಭಾಗದ ಮುಗ್ಧ ಅನ್ನದಾತರಿಗೆ ಆತ್ಮಹತ್ಯೆಯ ದುರ್ಭಾಗ್ಯ ಕರುಣಿಸಿದ ಕೀರ್ತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲಬೇಕಿದೆ. ಈಗಲಾದರೂ ಸರ್ಕಾರ ಸಂಕಷ್ಟದಿಂದ ನೊಂದಿರುವ ರೈತರಿಗೆ ನ್ಯಾಯ ಸಮ್ಮತ ಬರಪರಿಹಾರ ನೀಡಲಿ, ಇಲ್ಲವಾದರೆ ರೈತ ಆಕ್ರಂದನದ ಶಾಪ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಅವರು ಪ್ರತಿಕ್ರಯೆ ನೀಡಿದ್ದಾರೆ.

Exit mobile version