Site icon PowerTV

ಶಾಲಾ ವಾಹನ ಪಲ್ಟಿ : ಪ್ರಾಣಾಪಾಯದಿಂದ ಪಾರಾದ ಮಕ್ಕಳು

ಬೆಳಗಾವಿ : ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಸಿ ಗ್ರಾಮದಲ್ಲಿ ಖಾಸಗಿ ಶಾಲೆಗೆ ಸೇರಿದ್ದ ಬಸ್ ಪಲ್ಟಿಯಾಗಿದ್ದು ವಿದ್ಯಾರ್ಥಿಗಳು ಸೇರಿದಂತೆ ಚಾಲಕ ಅಪಾಯದಿಂದ ಪಾರಾಗಿದ್ದಾರೆ.

ಇಂದು ಬೆಳಗಿನ ಜಾವ ಘಟನೆ ನಡೆದಿದ್ದು, ಚಾಲಕ ಹಾಗೂ ನಿರ್ವಾಹಕ ಸೇರಿದಂತೆ 10 ವಿದ್ಯಾರ್ಥಿಗಳು ಬಸ್ ನಲ್ಲಿದ್ದರು. ಅದೃಷ್ಟವಶಾತ್ ಬಸ್ ಉರುಳಿ ಬಿದ್ದರೂ ಯಾವುದೇ ಹಾನಿ ಸಂಭವಿಸಿಲ್ಲ.

ತೇರದಾಳ ಪಟ್ಟಣದ ಡಾ. ಸಿದ್ದಾಂತ ದಾನಿಗೊಂಡ ಸೆಂಟ್ರಲ್ ಸ್ಕೂಲ್ ಗೆ ಸಂಬಂಧಿಸಿದ ಶಾಲಾ ವಾಹನ ಆಯತಪ್ಪಿ ಕಂದಕಕ್ಕೆ ಬಿದ್ದದೆ. ಬಸ್ ನಲ್ಲಿದ್ದ ವಿದ್ಯಾರ್ಥಿಗಳಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ತೇರದಾಳ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾಡಹಗಲೇ ಗ್ರಾಮಕ್ಕೆ ನುಗ್ಗಿದ ಕರಡಿ

ಹಾಡಹಗಲೇ ಗ್ರಾಮಕ್ಕೆ ಕರಡಿ ನುಗ್ಗಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಪುಲುಮಾಚಿಯಲ್ಲಿ ನಡೆದಿದೆ. ಪುಲುಮಾಚಿ ಮತ್ತು ಕಾಮೇಗೌಡನಹಳ್ಳಿ ರಸ್ತೆಯಲ್ಲಿ ಕರಡಿ ಕಾಣಿಸಿಕೊಂಡಿದೆ. ಬೆಳ್ಳಂಬೆಳಗ್ಗೆ ಗ್ರಾಮಕ್ಕೆ ನುಗ್ಗಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ.

Exit mobile version