Site icon PowerTV

ಮನೆ ಬೀಗ ಮುರಿದು 500 ಗ್ರಾಂ ಚಿನ್ನ, 4 ಕೆಜಿ ಬೆಳ್ಳಿ ಕಳ್ಳತನ

ಕೊಪ್ಪಳ : ಮನೆ ಬೀಗ ಮುರಿದು ಮೂರು ಮನೆಗಳ ಕಳ್ಳತನ ಮಾಡಿರುವ ಘಟನೆ ಕೊಪ್ಪಳ ನಗರದ ಕಿನ್ನಾಳ ರಸ್ತೆಯ ಎಫ್​ಸಿಐ ಗೋಡಾನ್ ಬಳಿ ನಡೆದಿದೆ‌.

500 ಗ್ರಾಂ ಚಿನ್ನಾಭರಣ, ನಾಲ್ಕು ಕೆಜಿ ಬೆಳ್ಳಿ ಆಭರಣಗಳನ್ನು ಕದ್ದು ಕಳ್ಳರು ಪರಾರಿಯಾಗಿದ್ದಾರೆ. ಚಿನ್ನದ ಉದ್ಯಮಿ ಉಲ್ಲಾಸ್ ರಾಯ್ಕರ್ ಮನೆಯಲ್ಲಿ ಈ ಘಟನೆ ನಡೆದಿದೆ.

ಕೊಪ್ಪಳದ ಚಿನ್ನದ ಉದ್ಯಮಿ ಉಲ್ಲಾಸ್ ರಾಯ್ಕರ್ ಕೆಲ‌ ದಿನದ ಹಿಂದಷ್ಟೇ ಹೊಸ ಚಿನ್ನಾಭರಣ ಅಂಗಡಿ ಆರಂಭಿಸಿದ್ದರು. ಅಂಗಡಿಯಲ್ಲಿ ಲಾಕರ್ ಇಲ್ಲದ ಕಾರಣ ಮನೆಯಲ್ಲಿ ಚಿನ್ನಾಭರಣಗಳನ್ನು ಇಟ್ಟಿದ್ದರು. ಕಳೆದ ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳರು ಕೈಚಳಕ ತೋರಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಕೊಪ್ಪಳ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಕೊಪ್ಪಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Exit mobile version