Site icon PowerTV

ಮಗುವಿನ ಕಿರಿಕಿರಿಗೆ ಬಾಣಂತಿಯನ್ನೇ ಕೊಲೆಗೈದ ಪಾಪಿ ಪತಿ

ರಾಯಚೂರು : ಆತ್ಮಹತ್ಯೆ ಎಂದು ಬಿಂಬಿಸಲಾಗಿದ್ದ ಬಾಣಂತಿ ಸಾವು ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಗುವಿನ ಕಿರಿಕಿರಿಗೆ ಬಾಣಂತಿಯನ್ನೇ ಪತಿ ಹತ್ಯೆ ಮಾಡಿರುವ ವಿಚಾರ ಪೊಲೀಸ್ ತನಿಖೆಯಲ್ಲಿ ಬಯಲಾಗಿದೆ.

ನಗರದ ಖಾಸಗಿ ಲಾಡ್ಜ್ ವೊಂದರಲ್ಲಿ ಕಳೆದ ಡಿಸೆಂಬರ್ 13 ರಂದು ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಉತ್ತರ ಪ್ರದೇಶ ಮೂಲದ ಮಹಿಳೆ ಸೋನಿ ಮೃತ ದುರ್ದೈವಿಯಾಗಿದ್ದು. ಪತಿ ಅವಿನಾಶ್‌ನಿಂದಲೇ ಸೋನಿ ಹತ್ಯೆ ಆಗಿದ್ದಳು.

ಆದ್ರೆ, ಬಾಣಂತಿ ಕೊಂದು ಅವಿನಾಶ್‌ ಸಿಜೇರಿಯನ್ ನೋವು ತಾಳಲಾರದೆ ಆತ್ಮಹತ್ಯ ಕಥೆ ಕಟ್ಟಿದ್ದ. ಸಾವಿಗೂ ಮುನ್ನ 20 ದಿನದ ಹಿಂದಷ್ಟೆ ಸೋನಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಆದರೆ, ಅವಿನಾಶ್ ಹಸಗೂಸು ಕಿರಿಕಿರಿ ಮಾಡುವುದರಿಂದ ಸಿಡುಕುತ್ತಿದ್ದ. ಇಷ್ಟಲ್ಲದೆ ಮಗು ಹುಟ್ಟಿದ ಬಳಿಕ ಆರ್ಥಿಕ ಪರಿಸ್ಥಿತಿ ಬಿಗಾಡಿಯಿಸಿತ್ತು. ಇದೇ ಅವಿನಾಶ್‌ ಪತ್ನಿಯನ್ನು ಕೊಲೆ ಮಾಡಲು ಪ್ಲ್ಯಾನ್ ಮಾಡಿ, ಪತ್ನಿ ಸೋನಿಯಾಳ ಕತ್ತು ಹಿಸುಕಿ ಕೊಲೆಗೈದು, ಫ್ಯಾನ್‌ಗೆ ನೇಣು ಬಿಗಿದಿದ್ದ ಎಂಬುದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಸದ್ಯ ರಾಯಚೂರು ಪಶ್ಚಿಮ ಠಾಣೆಯಲ್ಲಿ ಆತ್ಮಹತ್ಯೆ ಎಂದು ದಾಖಲಾಗಿದ್ದ ಪ್ರಕರಣ ಮಹಿಳಾ ಪೊಲೀಸ್ ಠಾಣೆಗೆ ಕೊಲೆ ಕೇಸ್ ಆಗಿ ವರ್ಗಾವಣೆಗೊಂಡಿದೆ. ಆರೋಪಿ ಅವಿನಾಶ್‌ನನ್ನು ಪೊಲೀಸರು ವಶಕ್ಕೆ ಪಡೆದು ತನಿಖೆಯನ್ನು ಮುಂದುವರಿಸಿದ್ದಾರೆ.

Exit mobile version