Site icon PowerTV

ಯತ್ನಾಳ್ ಒಬ್ಬ ಹುಚ್ಚ, ಅವನೊಬ್ಬ ನಾಯಕನಾ? : ಹೆಚ್. ವಿಶ್ವನಾಥ್

ವಿಜಯಪುರ : ಮಾಜಿ ಸಚಿವ ಮುರಗೇಶ ನಿರಾಣಿ  ಹಂದಿ, ಬೀದಿ ನಾಯಿ ಎಂದಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ ವಿರುದ್ಧ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಕಿಡಿಕಾರಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಶಾಸಕ ಯತ್ನಾಳ್ ಒಬ್ಬ ಹುಚ್ಚ, ಯತ್ನಾಳ್ ಮಾತಿಗೆ ರಾಜ್ಯದ ಜನತೆ ಯಾರೂ ಬೆಲೆ ಕೊಡಬೇಡಿ ಎಂದು ವಾಗ್ದಾಳಿ ನಡೆಸಿದ್ದಾರೆ.

ಯತ್ನಾಳ ರಾಜಕಾರಣಕ್ಕೆ ಅಪವಾದ. ತನ್ನದೇ ಜಾತಿಯ, ತನ್ನದೇ ಪಾರ್ಟಿಯ ಮುಖಂಡರಿಗೆ ಹಂದಿ, ನಾಯಿ ಅನ್ನುತ್ತಾರಾ..? ನಾಚಿಕೆ ಆಗಲ್ವಾ ಇವನಿಗೆ, ನಿನೊಬ್ಬ ನಾಯಕನಾ..? ಮುಂದಿನ ಯುವ ಪೀಳಿಗೆಗೆ ನೀನು ಕೊಡುವ ಸಂದೇಶವಾದರೂ ಏನು..? ಅಯೋಗ್ಯ ತನಕ್ಕೆ ಒಂದು ಮಿತಿ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಬ್ಬ ಪೆದ್ದ, ಲಂಚಕೋರ ಬಿಜೆಪಿ ರಾಜ್ಯಾಧ್ಯಕ್ಷ

ಮಾಜಿ ಸಿಎಂ ಬಿ.ಎಸ್. ಯಡ್ಡಿಯೂರಪ್ಪ ಪುತ್ರ ಬಿ.ವೈ. ವಿಜಯೇಂದ್ರರಿಂದಲೇ ಜೈಲಿಗೆ ಹೋದರು. ಆರ್‌ಟಿಜಿಎಸ್‌ನಲ್ಲಿ 20 ಕೋಟಿ ಲಂಚ ಪಡೆದರು. ಯಾರದರೂ ಆರ್‌ಟಿಜಿಎಸ್‌ನಲ್ಲಿ ‌ಲಂಚ ಪಡಿಯುತ್ತಾರಾ..? ಇಂತಹ ಒಬ್ಬ ಪೆದ್ದ ಹಾಗೂ ಲಂಚಕೋರ ಬಿಜೆಪಿ ರಾಜ್ಯಾಧ್ಯಕ್ಷ. ಯಾರಿಗಾದರೂ ಗೌರವ ಇದೆಯೇ? ಎಂದು ಅವರು ಹರಿಹಾಯ್ದಿದ್ದಾರೆ.

Exit mobile version