Site icon PowerTV

2ನೇ ದಿನವೂ ಪವರ್ ‘ಫರ್ನಿಚರ್ ಎಕ್ಸ್​ಪೋ’ಗೆ ಗ್ರಾಹಕರಿಂದ ಸಖತ್ ರೆಸ್ಪಾನ್ಸ್

ಬೆಂಗಳೂರು : ಒಂದು ಕನಸಿನ ಮನೆ ಕಟ್ಟಬೇಕು, ಆ ಮನೆಗೆ ಸೂಟ್ ಆಗುವ ಫರ್ನಿಚರ್ ಇರಬೇಕು, ಮನೆ ಜೊತೆಗೆ ಇಂಟೀರಿಯರ್ ಎಲ್ಲರನ್ನೂ ಅಟ್ರ್ಯಾಕ್ಟ್ ಮಾಡಬೇಕು ಅಂತ ಎಲ್ಲರೂ ಆಸೆ ಪಡ್ತಾರೆ. ಅಂತಹವರಿಗಾಗಿ ಪವರ್ ಟಿವಿ ಪ್ರಾಯೋಜಕತ್ವದಲ್ಲಿ ಪವರ್ ‘ಫರ್ನಿಚರ್ ಎಕ್ಸ್​ಪೋ’ ನಡೆಯುತ್ತಿದೆ.

ಒಂದು ಕಡೆ ಫುಲ್ ಭರ್ಜರಿಯಾಗಿ ಕಾಣುವ ಸೋಫಾಗಳು. ಮತ್ತೊಂದು ಕಡೆ ಐಷಾರಾಮಿ ಪೀಠೋಪಕರಣಗಳು ಎಲ್ಲರನ್ನೂ ಅಟ್ರ್ಯಾಕ್ಟ್ ಮಾಡೋ ಡೈನಿಂಗ್ ಟೇಬಲ್. ಹೀಗೆ ನೂರಾರು ಬಗೆಯ ವುಡ್ ವರ್ಕ್ ಒಂದೆಡೆಯಾದ್ರೆ. ಮತ್ತೊಂದು ಕಡೆ ಹೋಮ್ ಡೆಕೋರ್, ಕಾರ್ಪೆಟ್, ವಾಲ್ ಪೇಪರ್ ದಿನ ಬಳಕೆ ವಸ್ತುಗಳು ಮತ್ತೊಂದು ಕಡೆ.

ಬೆಂಗಳೂರಿನ ಜೆಪಿ ನಗರದ ಶುಭ್ ಕನ್ವೆಷನ್ ಸೆಂಟರ್‌ನಲ್ಲಿ ಈ ಪವರ್ ‘ಫರ್ನಿಚರ್ ಎಕ್ಸ್​ಪೋ’ ನಡೆಯುತ್ತಿದೆ. ಎರಡನೇ ದಿನವಾದ ಇಂದು ಬೆಳಗ್ಗೆಯಿಂದಲೇ ನೂರಾರು ಸಂಖ್ಯೆಯಲ್ಲಿ ಗ್ರಾಹಕರು ಭಾಗಿಯಾದರು. ತಮ್ಮ ಮನೆಗೆ ಹೊಂದಾಣಿಕೆಯಾಗುವಂತಹ ಪೀಠೋಪಕರಣಗಳು ಸೇರಿ ಹಲವು ವಸ್ತುಗಳನ್ನು ಬುಕ್ ಮಾಡಿಕೊಂಡ್ರು. ಕೆಲವು ಸ್ಟಾಲ್‌ಗಳಲ್ಲಿ 40 % ಆಫರ್ ಇದ್ರೆ. ಇನ್ನೂ ಕೆಲವು ಕಡೆ 60 ರಿಂದ 70 % ಇತ್ತು. ಹೀಗಾಗಿ ಜನ ಈ ಸುವರ್ಣವಕಾಶವನ್ನು ಮಿಸ್ ಮಾಡಿಕೊಳ್ಳಬಾರದು ಅಂತ ಬುಕ್ ಮಾಡಿದರು.

1000 ದಿಂದ 10 ಲಕ್ಷದ ವರೆಗೆ ವಸ್ತುಗಳು ಲಭ್ಯ

ಈ ಎಕ್ಸ್‌ಪೋದಲ್ಲಿ 1000 ದಿಂದ 10 ಲಕ್ಷದ ವರೆಗೆ ವಸ್ತುಗಳು ಸಿಗುತ್ತಿವೆ. ಮತ್ತೊಂದು ಸ್ಪೆಷಾಲಿಟಿ ಎಂದರೆ ಮಲೇಷಿಯಾ, ಸಿಂಗಾಪುರ, ದುಬೈ ಕಡೆಗೆ ಎಕ್ಸ್‌ಪೋರ್ಟ್ ಆಗುವಂತಹ ವಸ್ತುಗಳನ್ನು ಕೂಡ ಎಕ್ಸ್‌ಪೋದಲ್ಲಿ ಮಾರಾಟ ಮಾಡಲಾಗುತ್ತಿದೆ. ವೆರೈಟಿ ವುಡ್‌ನ ಆಯ್ಕೆಗಳು ಇಲ್ಲಿದ್ದು, ಜನ ತಮ್ಮಿಷ್ಟದ ವಸ್ತುಗಳನ್ನು ವೀಕೆಂಡ್ ಆದ ಕಾರಣ ಶಾಪಿಂಗ್ ಮಾಡಿ ಎಂಜಾಯ್ ಮಾಡಿದರು.

ಒಟ್ನಲ್ಲಿ, ಎಕ್ಸ್‌ಪೋಗೆ ಭರ್ಜರಿ ರೆಸ್ಪಾನ್ಸ್ ಸಿಗ್ತಾ ಇದ್ದು, ನಿಮ್ಮ ಮನೆಗೂ ಕೂಡ ಏನಾದರೂ ಫರ್ನಿಚರ್ ಬೇಕು ಅಂತ ಹೇಳಿದರೆ ನೀವು ಕೂಡ ಒಮ್ಮೆ ಜೆಪಿ ನಗರದಲ್ಲಿರುವ ಶುಭ್ ಕನ್ವೆನ್ಷನ್ ಸೆಂಟರ್‌ಗೆ ಉಚಿತವಾಗಿ ವಿಸಿಟ್ ಮಾಡಿ ಎಕ್ಸ್‌ಪೋದಲ್ಲಿ ಭೇಟಿ ನೀಡಿ ಖರೀದಿ ಮಾಡಬಹುದು.

Exit mobile version