Site icon PowerTV

ಬೆಂಗಳೂರಿನಲ್ಲಿ 4 ದಿನಗಳ ಕಾಲ ಪವರ್ ‘ಫರ್ನಿಚರ್ ಎಕ್ಸ್ ಪೋ’

ಬೆಂಗಳೂರು : ಪವರ್ ಟಿವಿ ಪ್ರಾಯೋಜಕತ್ವದಲ್ಲಿ ಇಂದಿನಿಂದ ನಾಲ್ಕು ದಿನಗಳ (ಡಿಸೆಂಬರ್​​ 19ರವರೆಗೆ) ಕಾಲ ಆಯೋಜಿಸಿರುವ ಪವರ್ ‘ಫರ್ನಿಚರ್ ಎಕ್ಸ್ ಪೋ’ಗೆ ಅದ್ದೂರಿ ಚಾಲನೆ ನೀಡಲಾಯಿತು.

ಬೆಂಗಳೂರಿನ ಶುಭ್ ಕನ್ವೆನ್ಷನ್ ಸೆಂಟರ್, ಬ್ರಿಗೇಡ್ ಮಿಲೇನಿಯಂ ಹತ್ತಿರ, ಜೆಪಿ ನಗರ 7ನೇ ಹಂತದಲ್ಲಿ ಈ ಫರ್ನಿಚರ್ ಎಕ್ಸ್‌ಪೋ ನಡೆಯುತ್ತಿದೆ.

ಇನ್ನು ಫರ್ನಿಚರ್‌ ಎಕ್ಸೋಪೋಗೆ ಶಾಸಕ ಸಿ.ಕೆ. ರಾಮಮೂರ್ತಿ ಅವರು ವಿದ್ಯುಕ್ತ ಚಾಲನೆ ಕೊಟ್ಟರು. ಅಲ್ಲದೆ ಶಾಸಕರು ಸೋಫಾ ಖರೀದಿಸಿ ಸಂತಸ ಪಟ್ಟರು. ಜೊತೆಗೆ ಸ್ಯಾಂಡಲ್‌ ಸ್ಟಾರ್‌ ಅಪೂರ್ಣ ಅವರು ಕೂಡ ಫರ್ನಿಚರ್‌ ಎಕ್ಸ್‌ಪೋದಲ್ಲಿ ಭಾಗಿಯಾಗಿದ್ದರು. ಹಲವು ಮಳಿಗೆಗೆ ಭೇಟಿ ನೀಡಿ ಫರ್ನಿಚರ್ಸ್ ಮತ್ತು ಹೋಮ್ ಡೆಕೋರ್​ಗ​ಳನ್ನು ವೀಕ್ಷಿಸಿದರು. ಪವರ್ ಟಿವಿ ಆಯೋಜಿಸಿರುವ ಎಕ್ಸ್ ಪೋಗೆ ಶುಭ ಹಾರೈಸಿದರು.

ಒಂದೇ ಸೂರಿನಡಿ ಮನೆಗೆ ಬೇಕಾದಂತಹ ಎಲ್ಲಾ ವಸ್ತುಗಳು ಲಭ್ಯ ಎಕ್ಸ್ ಪೋದಲ್ಲಿ ಲಭ್ಯವಿದೆ. ಶೇ.70 ರಷ್ಟು ರಿಯಾಯಿತಿದರದಲ್ಲಿ ಫರ್ನಿಚರ್‌ ಹಾಗೂ ಅಲಂಕಾರಿಕ ವಸ್ತುಗಳನ್ನು ಖರೀದಿಸಬಹುದಾಗಿದೆ. ನಿಮ್ಮ ಸುಂದರ ಮನೆಗೆ ಬೇಕಾಗುವ ಆಕರ್ಷಕ ಪೀಠೋಪಕರಣಗಳು ಲಭ್ಯವಾಗಲಿವೆ. ತಪ್ಪದೇ ಒಮ್ಮೆ ಭೇಟಿ ನೀಡಿ ಬೇಕಾದ ಪೀಠೋಪಕರಣಗಳನ್ನ ಖರೀದಿಸಬಹುದಾಗಿದೆ.

ಈ‌ ಎಕ್ಸ್ ಪೋದಲ್ಲಿ‌ ಸೋಫಾ, ಟೀಕ್ ವುಡ್ ಸೋಫಾ, ರೋಸ್ ವುಡ್ & ಲಕ್ಸುರಿ ಸೋಫಾ, ಡಿಸೈನರ್ ಸೋಫಾ, ಕಾಟ್ಸ್, ಉಯ್ಯಾಲೆ, ಡೈನಿಂಗ್ ಟೇಬಲ್, ಸೆಂಟರ್ ಟೇಬಲ್ಸ್, ಕಾರ್ಪೆಟ್ಸ್, ಕನ್ಸುಮರ್ ಐಟಮ್ಸ್ ಮುಂತಾದವುಗಳು ಗ್ರಾಹಕರ ಪ್ರಮುಖ ಆಕರ್ಷಣೆಯಾಗಿದೆ.

Exit mobile version