Site icon PowerTV

ಸಾಯಿಬಾಬಾ ಸಮಾಧಿ ದೇಗುಲಕ್ಕೆ ಶಾರುಕ್​ ಖಾನ್ ಭೇಟಿ!

ಮಹಾರಾಷ್ಟ್ರ: ತಮ್ಮ ನಟನೆಯ ‘ಡಂಕಿ’ ಸಿನಿಮಾದ ಬಿಡುಗಡೆಗೂ ಮುನ್ನ, ಬಾಲಿವುಡ್‌ನ ಖ್ಯಾತ ನಟ ಶಾರುಕ್ ಖಾನ್ ತಮ್ಮ ಪುತ್ರಿ ಸುಹಾನಾ ಖಾನ್ ಅವರೊಂದಿಗೆ ಶಿರ್ಡಿಯ ಸಾಯಿಬಾಬಾ ಸಮಾಧಿ ದೇಗುಲಕ್ಕೆ ಭೇಟಿ ನೀಡಿದರು.

ಇದನ್ನೂ ಓದಿ: ಒಂದು ತಿಂಗಳಲ್ಲೇ 1468ಕ್ಕೂ ಹೆಚ್ಚು ಡೇಂಘಿ ಕೇಸ್​​ ಪತ್ತೆ!

ಶಾರುಕ್ ಖಾನ್ ಅವರ ಭೇಟಿ ವೇಳೆ ದೇಗುಲದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಶಾರೂಕ್ ಜತೆಗೆ ಅವರ ವ್ಯವಸ್ಥಾಪಕಿ ಪೂಜಾ ದದ್ದಾನಿ ಕೂಡ ಇದ್ದರು. ಎರಡು ದಿನಗಳ ಹಿಂದಷ್ಟೇ ಜಮ್ಮುವಿನ ರೆಯಾಸಿ ಜಿಲ್ಲೆಯಲ್ಲಿರುವ ವೈಷ್ಟೋದೇವಿ ದೇಗುಲಕ್ಕೂ ಶಾರುಕ್ ಭೇಟಿ ನೀಡಿದ್ದರು. ಜವಾನ್ ಚಿತ್ರ ಬಿಡುಗಡೆ ಸಂದರ್ಭದಲ್ಲಿ ಅವರು ತಿರುಪತಿಗೆ ಭೇಟಿ ನೀಡಿದ್ದರು. ಶಾರುಕ್ ಅಭಿನಯದ ‘ಡುಂಕಿ’ ಚಿತ್ರ ಡಿ.21ರಂದು ಬಿಡುಗಡೆಯಾಗಲಿದೆ.

Exit mobile version