Site icon PowerTV

ಶೀಘ್ರ 9 ಸಾವಿರ ಸಾರಿಗೆ ಸಿಬ್ಬಂದಿ ನೇಮಕ : ರಾಮಲಿಂಗಾರೆಡ್ಡಿ

ಬೆಳಗಾವಿ : ಶೀಘ್ರ 9 ಸಾವಿರ ಸಾರಿಗೆ ಸಿಬ್ಬಂದಿ ನೇಮಕಾತಿ ಮಾಡಲಿದ್ದೇವೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಮಾತನಾಡಿರುವ ಅವರು, 2016ರ ನಂತರ ಸಿಬ್ಬಂದಿ ನೇಮಕಾತಿ ಆಗಲಿಲ್ಲ. ಪ್ರಯಾಣಿಕರಿಗೆ ಗುಣಮಟ್ಟದ ಸಂಚಾರ ಸೌಲಭ್ಯ ಒದಗಿಸುವ ಉದ್ದೇಶದಿಂದ 9 ಸಾವಿರ ಸಿಬ್ಬಂದಿ ನೇಮಕಾತಿ ಮಾಡಲಿದ್ದೇವೆ ಎಂದು ತಿಳಿಸಿದ್ದಾರೆ.

ಶಕ್ತಿ ಯೋಜನೆಯಿಂದ ನಮ್ಮ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರ ಸಂಖ್ಯೆ 15 ರಿಂದ 20 ಲಕ್ಷ ಹೆಚ್ಚಾಗಿದೆ. 4 ವರ್ಷ ಸತತವಾಗಿ ಬಸ್ ಖರೀದಿ ಮಾಡಿಲ್ಲ. ಫೆಬ್ರವರಿ ಕೊನೆ ವೇಳೆಗೆ 5,500 ಬಸ್ ಬರಲಿವೆ ಎಂದು ಹೇಳಿದ್ದಾರೆ.

ವಿಜಯೇಂದ್ರ ಪೋಸ್ಟ್​ಗೆ ಉತ್ತರ

ವಿದ್ಯಾರ್ಥಿಗಳಿಗೆ ‌ಬಸ್ ಸಮಸ್ಯೆ ಕುರಿತು ಶಾಸಕ ಬಿ.ವೈ ವಿಜಯೇಂದ್ರ‌ ಪೋಸ್ಟ್ ‌ವಿಚಾರವಾಗಿ ಮಾತನಾಡಿ, ವಿಜಯೇಂದ್ರ‌ ಅವರು ತುಮಕೂರಿನ ವಿದ್ಯಾರ್ಥಿಗಳ‌ ಬಸ್ ಸಮಸ್ಯೆ‌ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಶಾಲಾ ಮಕ್ಕಳಿಗೆ ತೊಂದರೆ ಆಗದಂತೆ‌ ಮಾಡ್ತಿದ್ದೇವೆ. ಜನವರಿ, ಫೆಬ್ರವರಿಯಲ್ಲಿ‌ ಹೊಸ‌ ಬಸ್ ಗಳು ಬರಲಿವೆ. ಜೊತೆಗೆ ಡ್ರೈವರ್, ಕಂಡಕ್ಟರ್ ಗಳ ನೇಮಕಾತಿ ಕೂಡ‌ ಆಗಲಿದೆ ಎಂದು ತಿಳಿಸಿದ್ದಾರೆ.

ಈಗಿನ ಸಮಸ್ಯೆಗಳಿಗೆ ಬಿಜೆಪಿ ‌ಕಾರಣ

ಈಗಿನ ಸಮಸ್ಯೆಗಳಿಗೆ ಹಿಂದಿನ ಬಿಜೆಪಿ ಸರ್ಕಾರ ‌ಕಾರಣ. ಹಿಂದೆ ‌ನೇಮಕಾತಿ ಮಾಡಿರಲಿಲ್ಲ. ಈಗ 9 ಸಾವಿರ ನೇಮಕಾತಿ ‌ಮಾಡಿಕೊಳ್ತಿದ್ದೇವೆ. ಎರಡು ತಿಂಗಳಲ್ಲಿ ಈಗಿರುವ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ನಮ್ಮ ಸರ್ಕಾರವನ್ನು ‌ದೂಷಿಸೋದು ಹಾಸ್ಯಾಸ್ಪದ ಎಂದು ಬಿಜೆಪಿಗರಿಗೆ ತಿರುಗೇಟು ನೀಡಿದ್ದಾರೆ.

Exit mobile version