Site icon PowerTV

ಹೊಸವರ್ಷ ಸಂಭ್ರಮಾಚರಣೆ: ಬ್ರಿಗೇಡ್‌ ರಸ್ತೆಯಲ್ಲಿ ಜೋಡಿಗಳಿಗೆ ಪ್ರತ್ಯೇಕ ಮಾರ್ಗ!

ಬೆಂಗಳೂರು: ಬ್ರಿಗೇಡ್ ರಸ್ತೆಯಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಹೋಗುವ ಜೋಡಿಗಳಿಗೆ ಬೆಂಗಳೂರು ಪೊಲೀಸರು ಸಿಹಿ ಸುದ್ದಿ ಕೊಡಲು ಪ್ಲಾನ್ ಮಾಡಿಕೊಂಡಿದ್ದಾರೆ.

ಹೊಸ ವರ್ಷಕ್ಕೆ ಬೆಂಗಳೂರಿನ ಬ್ರಿಗೇಡ್ ರೋಡ್‌ನಲ್ಲಿ ಜೋಡಿಗೆ ಈ ಬಾರಿ ಪ್ರತ್ಯೇಕವಾದ ಮಾರ್ಗ ಮಾಡಿಕೊಟ್ಟು ಸಂಭ್ರಮಾಚರಣೆಗೆ ಅನುವು ಮಾಡಿಕೊಡಲು ಬೆಂಗಳೂರು ಪೊಲೀಸರು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಕೆಲ ಪುಂಡರು ಜನರ ಗುಂಪಿನಲ್ಲಿ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿ ಅಲ್ಲಲ್ಲಿ ಸಣ್ಣಪುಟ್ಟ ಅಹಿತಕರ ಘಟನೆಗಳಿಗೆ ಕಾರಣವಾಗಿತ್ತು.

ಇದನ್ನೂ ಓದಿ: ಒಂಟಿ ವೃದ್ದನ ಮೇಲೆ ಹಲ್ಲೆ ನಡೆಸಿ ಧರೋಡೆಗೆ ಯತ್ನ!: ಆರೋಪಿಗಳನ್ನು ಹಿಡಿದ ಜನರು!

ಹೀಗಾಗಿ ಈ ಬಾರಿ ಹೊಸ ವರ್ಷ ಸಂಭ್ರಮಾಚರಣೆಗೆ ಆಗಮಿಸುವ ಜೋಡಿಗೆ ಎಂದೇ ಪ್ರತ್ಯೇಕ ಮಾರ್ಗ ಮಾಡಿ ಅಲ್ಲಿಯೇ ಹೊಸ ವರ್ಷ ಸಂಭ್ರಮಾಚರಣೆ ಮಾಡಿಕೊಳ್ಳಲು ವಿಶೇಷ ವ್ಯವಸ್ಥೆ ಕಲ್ಪಿಸಲು ಚಿಂತನೆ ನಡೆದಿದೆ.

Exit mobile version