Site icon PowerTV

ಬಲಪಂಥೀಯ ಕಾರ್ಯಕರ್ತರ ದ್ವೇಷ ಭಾಷಣಗಳ ಮೇಲೆ ನಿಗಾ: ಗೃಹ ಸಚಿವ ಪರಮೇಶ್ವರ್​!

ಬೆಂಗಳೂರು: ದ್ವೇಷದ ಭಾಷಣ ಪ್ರಕರಣಗಳನ್ನು ತಡೆಯಲು ಬಲಪಂಥೀಯ ಕಾರ್ಯಕರ್ತರ ಮೇಲೆ ಸರ್ಕಾರ ನಿಗಾ ಇರಿಸಿದೆ ಎಂದು ಗೃಹ ಸಚಿವ ಜಿ ಪರಮೇಶ್ವರ ತಿಳಿಸಿದ್ದಾರೆ.

ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ತುಳಸಿ ಮುನಿರಾಜು ಕೇಳಿದ ಪ್ರಶ್ನೆಗೆ ಡಾ.ಜಿ.ಪರಮೇಶ್ವರ ಉತ್ತ ತಿಳಿಸಿದ್ದಾರೆ. ಇದು ಆಡಳಿತಾರೂಢ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಗ್ಯುದ್ಧಕ್ಕೆ ಕಾರಣವಾಯಿತು. ಚಕ್ರವರ್ತಿ ಸೂಲಿಬೆಲೆ ಅವರಂತಹ ಕಾರ್ಯಕರ್ತರನ್ನು ಸರ್ಕಾರ ಗುರಿಯಾಗಿಸಿಕೊಂಡಿದೆ ಎಂದು ಬಿಜೆಪಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹೊಸವರ್ಷ ಸಂಭ್ರಮಾಚರಣೆ: ಬ್ರಿಗೇಡ್‌ ರಸ್ತೆಯಲ್ಲಿ ಜೋಡಿಗಳಿಗೆ ಪ್ರತ್ಯೇಕ ಮಾರ್ಗ!

ಹಿಂದುತ್ವವಾದಿಗಳ ಮೇಲೆ ನಡೆದಿದೆ ಎನ್ನಲಾದ ಹಲ್ಲೆ ಬಗ್ಗೆ ಬಿಜೆಪಿಯ ಮುನಿರಾಜುಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ, ಅಂತಹ ಯಾವುದೇ ಘಟನೆ ವರದಿಯಾಗಿಲ್ಲ. ಆದರೂ ಸರ್ಕಾರ ಬಲಪಂಥೀಯ ಕಾರ್ಯಕರ್ತರು ನೀಡುವ ಹೇಳಿಕೆಗಳ ಮೇಲೆ ನಿಗಾ ಇಟ್ಟಿದೆ ಎಂದು ಹೇಳಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಅವರು ಯುವಕರಲ್ಲಿ ರಾಷ್ಟ್ರಾಭಿಮಾನ ಮೂಡಿಸಿದ್ದಾರೆ. ಅವರ ವಿರುದ್ಧ ಕೋಮುಗಲಭೆ ಪ್ರಕರಣಗಳನ್ನು ಹಾಕುವ ಮೂಲಕ ಕಾಂಗ್ರೆಸ್ ಅವರನ್ನು ಗುರಿಯಾಗಿಸುತ್ತಿದೆ ಎಂದು ಗೌಡ ದೂರಿದ್ದಾರೆ.

Exit mobile version