Site icon PowerTV

ನವಜಾತ ಶಿಶುವನ್ನು ಚರಂಡಿಗೆ ಎಸೆದು ಓಡಿದ ಮಹಾತಾಯಿ

ರಾಯಚೂರು: ಇತ್ತೀಚಿಗೆ ಭ್ರೂಣ ಹತ್ಯೆ ಪ್ರಕರಣದ ಬೆನ್ನಲೇ ಮತ್ತೊಂದು ಹೀನ ಕೃತ್ಯ ಬೆಳಕಿಗೆ ಬಂದಿದೆ. 

ಹೌದು,ಮಹಾತಾಯಿಯೊಬ್ಬಳು ತನ್ನ ನವಜಾತ ಶಿಶುವೊಂದನ್ನು ಬಾಕ್ಸ್‌ನಲ್ಲಿ ಪ್ಯಾಕ್‌ ಮಾಡಿ ದೇವದುರ್ಗ ಪಟ್ಟಣದ ಬಸ್‌ಸ್ಟ್ಯಾಂಡ್ ಬಳಿ ಇರುವ ಚರಂಡಿಗೆ ಎಸೆದು ಜಾಗ ಖಾಲಿ ಮಾಡಿರುವ ಘಟನೆ ನಡೆದಿದೆ. ಈ ಅಮಾನವೀಯ ಕೃತ್ಯಕ್ಕೆ ಎಲ್ಲೆಡೆ ವ್ಯಾಪಕ ಟೀಕೆಗಳು ವ್ಯಕ್ತವಾಗಿವೆ. ದೇವದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ರಾಯಚೂರು ಜಿಲ್ಲೆಯ ದೇವದುರ್ಗ ಪಟ್ಟಣದ ಬಸ್‌ ನಿಲ್ದಾಣದಲ್ಲಿ ಇಂಥದ್ದೊಂದು ಘಟನೆ ನಡೆದಿದೆ. ಮಾಂಸದ ಮುದ್ದೆ ಸಮೇತ ನವಜಾತ ಶಿಶುವನ್ನು ತಾಯಿಯೊಬ್ಬಳು ಎಸೆದು ಓಡಿದ್ದಾಳೆ. ಬಸ್ ಸ್ಟ್ಯಾಂಡ್‌ನ ಚರಂಡಿಯಲ್ಲಿ ಬಾಕ್ಸ್‌ ಪತ್ತೆಯಾಗಿದ್ದು, ಮೃತ ಸ್ಥಿತಿಯಲ್ಲಿ ಶಿಶು ಪತ್ತೆಯಾಗಿದೆ.
ಮಗು ಎಸೆದ ಬಳಿಕ ಪಾಪಿ ತಾಯಿ ಅಲ್ಲಿಂದ ಓಡಿಹೋಗಿದ್ದಾಳೆ. ಹೀಗಾಗಿ ಚರಂಡಿಯಲ್ಲಿ ಸತ್ತು ಬಿದ್ದಿದ್ದ ಶಿಶುವಿನ ಕಳೇಬರವನ್ನು ಸಾರ್ವಜನಿಕರೇ ಹೊರಗೆ ತೆಗೆದಿದ್ದಾರೆ. ಇಂಥ ಒಂದು ಅಮಾನವೀಯ ಘಟನೆಗೆ ಹಿಡಿಶಾಪ ಹಾಕಿದ್ದಾರೆ.
ಬಳಿಕ ಅವರೇ ಎಲ್ಲರೂ ಸೇರಿ ಆ ಶಿಶುವಿನ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ.

 

 

Exit mobile version