Site icon PowerTV

ಬಿಎಂಎಸ್​ಐಟಿ ಕಾಲೇಜಿನಲ್ಲಿ ಕಣ್ಮನ ಸೆಳೆದ ಕಲರವ ಕಾರ್ಯಕ್ರಮ!

ಬೆಂಗಳೂರು: ಯಲಹಂಕದ ಆವಲಹಳ್ಳಿ ಸಮೀಪವಿರುವ BMSIT ಕಾಲೇಜಿನಲ್ಲಿ ಕಲರವ ಹಾಸ್ಟೆಲ್ ಫೆಸ್ಟ್​  ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಚಿತ್ರ ನಟಿ ಸೋನುಗೌಡ, ಆರ್​.ಜೆ ವಿಕ್ಕಿ ಸರಿಗಮಪ ಖ್ಯಾತಿಯ ಗಾಯಕಿ ಸಾಕ್ಷಿ ಕೊಲ್ಲೂರು ಪಾಲ್ಗೊಂಡಿದ್ದರು.

ಕಲರವ ಹಾಸ್ಟೆಲ್ ಫೆಸ್ಟ್​ ಹೆಸರಿನಲ್ಲಿ ದಿನವಿಡೀ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಾದ ನೃತ್ಯ, ಹಾಡುಗಾರಿಕೆ, ಪ್ಯಾಷನ್ ಶೋ, ಸಂಗೀತ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.‌ BMSIT ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.‌

ಇದನ್ನೂ ಓದಿ: ಮನೋರಂಜನ್​ ನಿವಾಸಕ್ಕೆ ಗುಪ್ತಚರ ಇಲಾಖೆ ಪೊಲೀಸರು ಭೇಟಿ!

ಈ ವೇಳೆ ಹಾಸ್ಟೆಲ್ ನಲ್ಲಿ ನಡೆದ ಕ್ರೀಡೆಗಳಲ್ಲಿ ವಿಜೇತರಾದವರಿಗೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸೋನುಗೌಡ ಮತ್ತು ಇತರರು ಬಹುಮಾನ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಮೋಹನ್ ಬಾಬು ಜಿ.ಎನ್, ಉಪ ಪ್ರಾಂಶುಪಾಲ ಅನಿಲ್ ಜಿ.ಎನ್, ಹಾಸ್ಟೆಲ್ ವಾರ್ಡನ್ ರಾಜು ಹಜಾರೆ ಮತ್ತು ಡಾ.ದ್ವಾರಕಾ ಪ್ರಸಾದ್ ಭಾಗವಹಿಸಿದ್ದರು.

Exit mobile version