Site icon PowerTV

ಮೇವಿನ ಸಮಸ್ಯೆ: ಗೋಶಾಲೆ ಸಹಾಯಕ್ಕೆ ‘ಕೈ’ಜೋಡಿಸುವಂತೆ ಸಿದ್ದಲಿಂಗ ಶ್ರೀ ಮನವಿ

ಬೆಂಗಳೂರು: ಸಿದ್ಧಲಿಂಗೇಶ್ವರ ಗದ್ದುಗೆ ಮಠದ ಗೋಶಾಲೆಯಲ್ಲಿ ಮೇವು ಸಮಸ್ಯೆ ಉಂಟಾಗಿದ್ದು ಸಹಾಯಕ್ಕೆ ಕೈ ಜೋಡಿಸುವಂತೆ ಶ್ರೀಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಮನವಿ ಮಾಡಿದ್ದಾರೆ.

ನಮ್ಮ ಗೋಶಾಲೆಯ ಹಸುಗಳಿಗೆ ಬೇಕಾದ ಮೇವಿನ ಅವಶ್ಯಕತೆ ಉಂಟಾಗಿದೆ. ಆದ್ದರಿಂದ ಹಸುಗಳಿಗೆ ಬೇಕಾದ ಹುಲ್ಲು, ಕಾಳುಗಳು, ಶೇಂಗಾ ಹಿಂಡಿ, ಕೊಬ್ಬರಿ ಹಿಂಡಿ, ಬೂಸಾ, ತೌಡು, ಹತ್ತಿಕಾಳುಗಳು,ಭತ್ತದ ತೌಡು, ಪೇಣಿ ಹಾಗೂಹಸುಗಳಿಗೆ ಬೇಕಾದನ ಮೇವನ್ನು ದಾನವಾಗಿ ನೀಡಿ ಪುಣ್ಯಕೋಟಿಯ ಸೇವೆಯನ್ನು ಮಾಡಿ ಕೋಟಿ ಪುಣ್ಯವನ್ನು ಗಳಿಸಿ ಎಂದು ಕೋರಿದ್ದಾರೆ.

ನಿಮ್ಮ ಸೇವೆಯಿಂದ ಮಹಾಲಕ್ಷ್ಮಿಯು ನಿಮಗೆ ಅನುಗ್ರಹವನ್ನು ಉಂಟುಮಾಡುತ್ತಾಳೆ. ದೇವಿ ಇಷ್ಟಕಾಮೇಶ್ವರಿಯ ಅನುಗ್ರಹ ಸಿಗುತ್ತದೆ. ಇಂತಹ ಗೋವನ್ನು ಶಾಸ್ತ್ರೋಕ್ತವಾಗಿ ಸೇವೆಯನ್ನು ಮಾಡುವುದರಿಂದ ನಮಗೆ ಅಷ್ಟೈಶ್ವರ್ಯಗಳೇ ಪ್ರಾಪ್ತಿಯಾಗುತ್ತವೆ ಎಂದು  ಗೋ ಸೇವೆಯ ಮಹತ್ವದ ಬಗ್ಗೆ ತಿಳಿಸಿದ್ದಾರೆ.

ಹಣದ ರೂಪದಲ್ಲಿ ಸಹಾಯ ಮಾಡುವವರು ದಯವಿಟ್ಟು 6364167671 ನಂಬರ್ ಗೆ ಗೂಗಲ್ ಪೇ ಅಥವಾ ಫೋನ್ ಪೇ ಮಾಡಬಹುದು ಎಂದು ತಿಳಿಸಿದ್ದಾರೆ.

 

 

Exit mobile version