Site icon PowerTV

ಬೀದಿಯಲ್ಲಿ ಮಾತಾಡಿ ಯತ್ನಾಳ್‌ ಉತ್ತರ ಕುಮಾರ ಆಗೋದು ಬೇಡ: ಕೆ.ಎಸ್​ ಈಶ್ವರಪ್ಪ

ಶಿವಮೊಗ್ಗ: ಯತ್ನಾಳ್‌ ಬೀದಿಯಲ್ಲಿ ಮಾತಾಡಿ ಉತ್ತರ ಪೌರುಷ ತೋರಿಸುವುದು ಬೇಡ ಎಂದು ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪ ವಾಗ್ವದ ಮಾಡಿದ್ಧಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಾಧ್ಯಕ್ಷ, ವಿಪಕ್ಷ ನಾಯಕನ ಆಯ್ಕೆ ಬಗ್ಗೆ ಯತ್ನಾಳ್‌ಗೆ ಅಸಮಾಧಾನವಿದ್ದರೆ ಬಹಿರಂಗವಾಗಿ ಅಸಮಾಧಾನ ತೋರಿಸುವುದು ಸರಿಯಲ್ಲ.ಕುಟುಂಬ ಸಮಸ್ಯೆಯನ್ನು ಕುಟುಂಬ ಸದಸ್ಯರು ಸರಿಪಡಿಸುತ್ತಾರೆ. ಯತ್ನಾಳ್ ಪಕ್ಷದ ಚೌಕಟ್ಟಿನಲ್ಲಿ ಮಾತನಾಡಬೇಕು. ಅದನ್ನು ಬಿಟ್ಟು ಬೀದಿಯಲ್ಲಿ ನಿಂತು ಮಾತನಾಡುವುದು, ಇದಕ್ಕಾಗಿ ಪಕ್ಷದ ಸಭೆಗೆ ಹೋಗಲ್ಲ ಎನ್ನುವುದು ಅವರ ಉತ್ತರಕುಮಾರನ ಪೌರುಷ ಆಗುತ್ತದೆ ಎಂದು ಕೆ.ಎಸ್‌.ಈಶ್ವರಪ್ಪ ಚಾಟಿ ಬೀಸಿದ್ದಾರೆ.

ಇದನ್ನೂ ಓದಿ: ಶಾಲೆ ಮುಂದೆ ಮದ್ಯಸೇವನೆ: ಕೇಳಿದಕ್ಕೆ ಯುವಕನನ್ನೇ ಕೊಲೆಗೈದ ಹಂತಕರು 

ಯತ್ನಾಳ್ ಹಿಂದುತ್ವವಾದಿ, ರಾಷ್ಟ್ರೀಯತಾವಾದಿ ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ನಡ್ಡಾ, ನರೇಂದ್ರ ಮೋದಿ, ಅಮಿತ್ ಶಾ ಅವರಿಗಿಂತ ಯತ್ನಾಳ್ ದೊಡ್ಡವರಲ್ಲ.ಅವರಿಗೆ ಅಸಮಾಧಾನ ಇರುವುದು ನಿಜ. ಅದಕ್ಕಾಗಿ ಪಕ್ಷದ ಸಭೆಗೂ ಹೋಗದೇ ಇರುವುದರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದರು.

Exit mobile version