Site icon PowerTV

ಕಾಂಗ್ರೆಸ್​ ಔತಣಕೂಟದಲ್ಲಿ ಬಿಜೆಪಿ ಶಾಸಕ ಸೋಮಶೇಖ‌ರ್, ಹೆಬ್ಬಾರ್ ಭಾಗಿ!

ಬೆಳಗಾವಿ: ಕಾಂಗ್ರೆಸ್ ಶಾಸಕರಿಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಏರ್ಪಡಿಸಿದ್ದ ಔತಣಕೂಟದಲ್ಲಿ ಬಿಜೆಪಿಯ ಇಬ್ಬರು ಶಾಸಕರು ಕಾಣಿಸಿಕೊಂಡು ಅಚ್ಚರಿ ಮೂಡಿಸಿದ್ದಾರೆ.

ಶಾಸಕರಿಗೆ ಬುಧವಾರ ರಾತ್ರಿ ಏರ್ಪಡಿಸಿದ ಔತಣಕೂಟದಲ್ಲಿ ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಟಿ ಸೋಮಶೇಖರ್ ಮತ್ತು ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರು ಭಾಗವಹಿಸಿದರು. ಈಗಾಗಲೇ ಬಿಜೆಪಿ ಸಭೆಗಳಿಂದ ದೂರ ಉಳಿದಿರುವ ಅವರು, ಮತ್ತೆ ಕಾಂಗ್ರೆಸ್ ಸೇರುವ ಸಾಧ್ಯತೆ ದಟ್ಟವಾಗಿದೆ.
ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೇಳುವ ನೆಪದಲ್ಲಿ ಹಲವು ಬಾರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವ ಈ ಇಬ್ಬರೂ ಶಾಸಕರು, ಬುಧವಾರ ರಾತ್ರಿ ಪಕ್ಷದ ಶಾಸಕರ ಜೊತೆ ಬೋಜನಕೂಟದಲ್ಲಿ ಭಾಗವಹಿಸಿದ್ದರು ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಸಂಸತ್​ನಲ್ಲಿ ಸ್ಮೋಕ್​ ಬಾಂಬ್​ ಎಸೆದ ಮನೋರಂಜನ್​ ಹಿನ್ನೆಲೆ ಏನು ಗೊತ್ತಾ?

ಅದಕ್ಕೂ ಮೊದಲು ಕಾಂಗ್ರೆಸ್ ಶಾಸಕರ ಸಭೆ ನಡೆಯಿತು. ವಿಧಾನಸಭೆ ತಡವಾಗಿ ಮುಕ್ತಾಯವಾದ ಕಾರಣ ಎಲ್ಲ ಶಾಸಕರು ಬಂದು ಸೇರುವುದು ವಿಳಂಬವಾಯಿತು. ಹೀಗಾಗಿ ವಿಳಂಬವಾಗಿ ಸಭೆ ಆರಂಭವಾಯಿತು. ಸಭೆಯಲ್ಲಿ ಸೋಮಶೇಖರ್ ಮತ್ತು ಹೆಬ್ಬಾರ್ ಭಾಗವಹಿಸಲಿಲ್ಲ. ಆದರೆ, ಭೋಜನದಲ್ಲಿ ಎಲ್ಲರ ಜೊತೆ ಭಾಗವಹಿಸಿದರು ಎಂದೂ ಮೂಲಗಳು ಹೇಳಿವೆ.

Exit mobile version