Site icon PowerTV

ಬೈಕ್ ಡಿಕ್ಕಿ : ಎಂಎಲ್​ಸಿ ಅರವಿಂದ ಅರಳಿ ತಾಯಿ ಸಾವು

ಕಲಬುರಗಿ : ರಸ್ತೆ ದಾಟುವಾಗ ಅಪರಿಚಿತ ಬೈಕ್ ಡಿಕ್ಕಿಯಾಗಿ ವಿಧಾನ ಪರಿಷತ್ ಸದಸ್ಯರ ತಾಯಿ ಮೃತಪಟ್ಟಿದ್ದಾರೆ.

ಕಲಬುರಗಿ ನಗರದ ಸೇಡಂ ರಿಂಗ್ ರಸ್ತೆಯ ಟೊಯೋಟಾ ಶೋರೂಂ ಬಳಿ ಈ ಘಟನೆ ನಡೆದಿದೆ. ಬೀದರ್ ಮೂಲದ ಸುಮಿತ್ರಾಬಾಯಿ (75) ಮೃತಪಟ್ಟಿರುವ ಅರವಿಂದ್ ಕುಮಾರ್ ಅರಳಿ ಅವರ ತಾಯಿ.

ಬಡೇಪುರ ಕಾಲೋನಿಯಲ್ಲಿರುವ ಮಗಳು ಶೀಲಾದೇವಿ ಅವರ ಮನೆಯಲ್ಲಿ ಇವರು ವಾಸವಿದ್ದರು. ಸಂಜೆ ರಸ್ತೆ ದಾಟುವಾಗ ಅಪರಿಚಿತ ಬೈಕ್ ಡಿಕ್ಕಿ ಹೊಡೆದಿದ್ದು, ಸುಮಿತ್ರಾಬಾಯಿ ಅವರ ತಲೆಗೆ ತೀವ್ರ ಪೆಟ್ಟಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ರವಾನಿಸಲು ಮುಂದಾಗಿದ್ದು, ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ.

ಸ್ಥಳಕ್ಕೆ ಡಿಸಿಪಿ ಕನ್ನಿಕಾ ಸಿಕ್ರಿವಾಲ್, ಇನ್ಸ್ಪೆಕ್ಟರ್ ಖಾಜಾ ಹುಸೇನಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಸಂಚಾರ ಠಾಣೆ-2ರಲ್ಲಿ ಪ್ರಕರಣ ದಾಖಲಾಗಿದೆ.

Exit mobile version