Site icon PowerTV

ಕಾಂಗ್ರೆಸ್ ಶಾಸಕರಿಗೆ​​ ಭೋಜನ ಕೂಟ ಆಯೋಜನೆ ಮಾಡಿದ ಡಿಕೆಶಿ!

ಬೆಳಗಾವಿ: ಕಾಂಗ್ರೆಸ್ ಶಾಸಕರಿಗೆ ಡಿ.ಕೆ.ಶಿವಕುಮಾರ್​​ ಭೋಜನ ಕೂಟ ಆಯೋಜನೆ ಮಾಡಿದ್ದಾರೆ. ನಾಳೆ ರಾತ್ರಿ ಬೆಳಗಾವಿ ಫಾರಂ ರೀಟ್ರಿಟ್‌ನಲ್ಲಿ ಭೋಜನ ಕೂಟಯನ್ನ ಹಮ್ಮಿಕೊಂಡಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬಳಿಕ ಭೋಜನ‌ ಕೂಟ ಆಯೋಜನೆ ಮಾಡಲಾಗಿದ್ದು, ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ  ನಾಳೆ ಅಥವಾ ನಾಡಿದ್ದು ಡಿಕೆಶಿ ಸಿಬಿಐ ಕೇಸ್ ವಾಪಾಸ್ ಪಡೆದ ವಿಚಾರದ ಬಗ್ಗೆ ಬಿಜೆಪಿ ಪ್ರಸ್ತಾಪ ಮಾಡುವ ಸಾಧ್ಯತೆ ಇದೆ. ಇನ್ನು ಈ ವೇಳೆ ಸರ್ಕಾರದ ನಿರ್ಧಾರ ಸಮರ್ಥನೆ ಮಾಡಿಕೊಳ್ಳಬೇಕು. ವಿಪಕ್ಷಗಳ ಆರೋಪಗಳಿಗೆ ತಿರುಗೇಟು ಕೊಡಬೇಕು. ಹೀಗಾಗಿ ಶಾಸಕರನ್ನ ವಿಶ್ವಾಸಕ್ಕೆ ಪಡೆಯಲು ಡಿಕೆಶಿವಕುಮಾರ್​ ಮುಂದಾಗಿದ್ದಾರೆಂಬ ಪ್ರಶ್ನೆ ಮುಂದಾಗಿದೆ.

ಇದನ್ನೂ ಓದಿ:ಶೀಘ್ರವೇ ಪೆಟ್ರೋಲ್-ಡೀಸೆಲ್ ದರ ಇಳಿಕೆ!?

ಇನ್ನು ಸಿಎಂ ಸಿದ್ದರಾಮಯ್ಯ ಸೇರಿ ಸಚಿವರು, ಶಾಸಕರಿಗೆ ಈ ಭೋಜನ ಕೂಟ ಆಹ್ವಾನ ನೀಡಲಾಗಿದೆ.

Exit mobile version