Site icon PowerTV

ಅಯ್ಯೋ ಪಾಪ..! ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಎರಡೂವರೆ ಎಕರೆ ಕಬ್ಬು ಬೆಳೆ ಭಸ್ಮ

ವಿಜಯಪುರ : ವಿದ್ಯುತ್ ಶಾರ್ಟ್ ಸರ್ಕ್ಯೂಟನಿಂದ ಬೆಂಕಿ ತಗುಲಿ ಎರಡೂವರೆ ಎಕರೆ ಕಬ್ಬು ಬೆಳೆ ಸುಟ್ಟು ಭಸ್ಮವಾಗಿದೆ. 

ವಿಜಯಪುರ ಜಿಲ್ಲೆಯ ಬಬಲೇಶ್ವರ ಗ್ರಾಮದ ಮಲ್ಲಪ್ಪ ಭೀಮಪ್ಪ ಬೂದಿಹಾಳ ಅವರ ತೋಟದಲ್ಲಿ ಈ ಘಟನೆ ನಡೆದಿದೆ. ಅಂದಾಜು 8 ಲಕ್ಷ ರೂಪಾಯಿ ಹಾನಿಯಾಗಿದೆ.

ಮೂರುವರೆ ಎಕರೆ ಕಬ್ಬು ಬೆಳೆ ಏಳೆಂಟು ಅಡಿಗೂ ಹೆಚ್ಚು ಬೆಳೆದು ನಿಂತಿತ್ತು. ಅದರಲ್ಲಿ ಒಂದು ಎಕರೆ ಕಬ್ಬು ಕಟಾವು ಮಾಡಿದ್ದು ಎಂಬತ್ತೇಳು ಟನ್ ಕಬ್ಬು ಕಾರ್ಖಾನೆಗೆ ಕಳುಹಿಸಲಾಗಿದೆ. ಇನ್ನುಳಿದ ಎರಡೂವರೆ ಎಕರೆ ಕಬ್ಬು ಕಟಾವಣೆಯನ್ನು ಮಾಡುವವರಿದ್ದರು.

ಈ ಸುದ್ದಿ ಓಸಿದ್ದೀರಾ? : ಆಕಸ್ಮಿಕ ಬೆಂಕಿ, ಸುಟ್ಟು ಕರಕಲಾದ ನಾಲ್ಕು ಎಕರೆ ಕಬ್ಬು ಬೆಳೆ

ವಿದ್ಯುತ್ ಕಂಬದಿಂದ ಮೋಟರ್​ವರೆಗೆ ಎಳೆಯಲಾದ ವಿದ್ಯುತ್ ಕೇಬಲ್ ಸುಟ್ಟು ಇಡೀ ಕಬ್ಬಿನ ಪಡಕ್ಕೆ ಬೆಂಕಿ ತಗುಲಿ ಹಾನಿಯಾಗಿದೆ ಎಂದು ರೈತ ಮಲ್ಲಪ್ಪ ಅಳಲು ತೋಡಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ಮಾಡಿದ್ದಾರೆ. ಇನ್ನೂ, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Exit mobile version